ಕೀವ್: ಯುದ್ಧಕಾಲದ ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್ (Oleksii Reznik) ಅವರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ರುಸ್ಟೆಮ್ ಉಮೆರೋವ್ ಅವರನ್ನು ನಾಮನಿರ್ದೇಶನ ಮಾಡಿ ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodimir Zelensky) ಆದೇಶ ಹೊರಡಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾ (Russia) ಯುದ್ಧವು 19 ನೇ ತಿಂಗಳನ್ನು ಪ್ರವೇಶಿಸಿದೆ. ಈ ಹೊತ್ತಿನಲ್ಲಿ ರಕ್ಷಣಾ ವ್ಯವಸ್ಥೆ ವಿಚಾರವಾಗಿ ಸಚಿವಾಲಯಕ್ಕೆ ಹೊಸ ವಿಧಾನಗಳ ಅಗತ್ಯವಿದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: 2ನೇ ಮಹಾಯುದ್ಧದ ನಂತರ ಅತಿ ಹೆಚ್ಚು ಸಾವುಗಳಾದ ಯುದ್ಧ ರಷ್ಯಾ-ಉಕ್ರೇನ್ ವಾರ್; ಮಡಿದವರೆಷ್ಟು?
Advertisement
Advertisement
ಹೊಸ ರಕ್ಷಣಾ ಸಚಿವರಾಗಲು ಉಕ್ರೇನ್‌ನ ಮಾಜಿ ಪೀಪಲ್ಸ್ ಡೆಪ್ಯೂಟಿ ರುಸ್ಟೆಮ್ ಉಮೆರೊವ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಝೆಲೆನ್ಸ್ಕಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
Advertisement
ಉಕ್ರೇನ್‌ನ ರಕ್ಷಣಾ ಸಚಿವರನ್ನು ಬದಲಿಸಲು ನಾನು ನಿರ್ಧರಿಸಿದ್ದೇನೆ. ಮಿಲಿಟರಿ ಮತ್ತು ಸಮಾಜದೊಂದಿಗೆ ಉತ್ತಮ ಪ್ರಮಾಣದಲ್ಲಿ ಸಂವಹನದ ಹೊಸ ವಿಧಾನಗಳು ಮತ್ತು ಇತರ ಸ್ವರೂಪಗಳ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?
Advertisement
ಈಗ ರುಸ್ಟೆಮ್ ಉಮೆರೋವ್ ಸಚಿವಾಲಯವನ್ನು ಮುನ್ನಡೆಸಬೇಕು. ಉಕ್ರೇನ್‌ನ ವರ್ಕೋವ್ನಾ ರಾಡಾ (ಶಾಸಕಾಂಗ) ಈ ವ್ಯಕ್ತಿಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಉಮೆರೋವ್‌ಗೆ ಯಾವುದೇ ಹೆಚ್ಚುವರಿ ಪರಿಚಯಗಳ ಅಗತ್ಯವಿಲ್ಲ. ಸಂಸತ್ತು ಈ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.
ಫೆಬ್ರವರಿ 24, 2022 ರಂದು ರಷ್ಯಾ-ಉಕ್ರೇನ್ ಯುದ್ಧದ ಆರಂಭದಿಂದಲೂ ರೆಜ್ನಿಕೋವ್ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದರು. ಯುದ್ಧವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈಗಲೂ ಎರಡು ರಾಷ್ಟ್ರಗಳ ನಡುವೆ ಯುದ್ಧವು ಉಲ್ಬಣಗೊಳ್ಳುತ್ತಲೇ ಇದೆ.
Web Stories