ನವದೆಹಲಿ: ರಷ್ಯಾದಿಂದ ಈಗ ದಾಖಲೆ ಪ್ರಮಾಣದಲ್ಲಿ ಭಾರತ ತೈಲವನ್ನು ಆಮದು ಮಾಡುತ್ತಿದ್ದು, ಜೂನ್ ತಿಂಗಳಿನಲ್ಲಿ ಪ್ರತಿ ದಿನ 9,50,000 ಬ್ಯಾರೆಲ್ ತೈಲವನ್ನು ಆಮದು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತಕ್ಕೆ ಕಡಿಮೆ ದರದಲ್ಲಿ ತೈಲವನ್ನು ನೀಡುತ್ತೇವೆ ಎಂದು ರಷ್ಯಾ ಆಫರ್ ಹೇಳಿದ ಬೆನ್ನಲ್ಲೇ ದೇಶದ ತೈಲ ಕಂಪನಿಗಳು ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಲು ಆರಂಭಿಸಿವೆ.
Advertisement
Advertisement
ಜೂನ್ ತಿಂಗಳಿನಲ್ಲಿ 4.8 ದಶಲಕ್ಷ ಬಿಪಿಡಿ(ಬ್ಯಾರೆಲ್ಸ್ ಪರ್ ಡೇ) ತೈಲವನ್ನು ಭಾರತ ವಿದೇಶದಿಂದ ಆಮದು ಮಾಡಿಕೊಂಡಿದೆ. ಮೇ ತಿಂಗಳಿಗೆ ಹೋಲಿಸಿದರೆ ಶೇ.3.8 ರಷ್ಟು ಕಡಿಮೆಯಾದರೂ ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಶೇ.23 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ತೈಲ ಆಮದಾಗಿತ್ತು.
Advertisement
ಮೇ ತಿಂಗಳಿಗೆ ಹೋಲಿಸಿದರೆ ರಷ್ಯಾದಿಂದ ತೈಲ ಆಮದು ಮಾಡುವ ಪ್ರಮಾಣ ಶೇ.15 ರಷ್ಟು ಹೆಚ್ಚಾಗಿದೆ. ಸೌದಿ ಅರೇಬಿಯಾ ಮತ್ತು ಇರಾಕ್‌ನಿಂದ ಆಮದಾಗುವ ಪ್ರಮಾಣ ಕ್ರಮವಾಗಿ ಶೇ.10.5 ಮತ್ತು ಶೇ.13.5 ರಷ್ಟು ಇಳಿಕೆಯಾಗಿದೆ. ಮಧ್ಯಪ್ರಾಚ್ಯ ದೇಶದಿಂದ ಖರೀದಿಸುತ್ತಿರುವ ತೈಲ ಪ್ರಮಾಣ ಶೇ.59.3 ರಿಂದ ಶೇ.56.3ಕ್ಕೆ ಕುಸಿದಿದೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್
Advertisement
ಇಲ್ಲಿಯವರೆಗೆ ಭಾರತ ಇರಾಕ್‌ನಿಂದ ಹೆಚ್ಚಿನ ತೈಲ ಆಮದು ಮಾಡಿಕೊಂಡರೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ರಷ್ಯಾ ಎರಡನೇ ಸ್ಥಾನ ಪಡೆದರೆ ಸೌದಿ ಅರೇಬಿಯಾ ಮೂರನೇ ಸ್ಥಾನ ಕುಸಿದಿದೆ.
ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲ ಪಡೆಯುತ್ತಿರುವ ಭಾರತ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮತ್ತು ನಾಯರಾ ಎನರ್ಜಿ ಆ ತೈಲವನ್ನು ಸಂಸ್ಕರಿಸಿ ವಿದೇಶಗಳಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿವೆ.
ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಷ್ಯಾದಿಂದ ಭಾರತ 22,500 ಬಿಪಿಡಿ ತೈಲವನ್ನು ಆಮದು ಮಾಡಿದ್ದರೆ ಈ ವರ್ಷ ಏಪ್ರಿಲ್ ಜೂನ್ ಅವಧಿಯಲ್ಲಿ ಅವಧಿಯಲ್ಲಿ 6,82,200 ಬಿಪಿಡಿ ತೈಲವನ್ನು ಆಮದು ಮಾಡಿದೆ.