ಕೀವ್: ಎರಡು ದಿನಗಳ ಹಿಂದೆಯಷ್ಟೇ ರಷ್ಯಾಕ್ಕೆ (Russia) ತಿರುಗೇಟು ನೀಡಿದ್ದ ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ (Rocket) ದಾಳಿ ಮಾಡುವ ಮೂಲಕ ರಷ್ಯಾ ಸೇಡು ತೀರಿಸಿಕೊಂಡಿದೆ.
#BREAKING
Mushroom cloud in centre of #Kiev
4 Explosions reported in centre of Kiev
#Kyiv #CrimeanBridge pic.twitter.com/N54jHFUBcr
— UkraineNews (@Ukraine66251776) October 10, 2022
Advertisement
ರಷ್ಯಾ ಸೇನೆ ಸೋಮವಾರ ಬೆಳ್ಳಂಬೆಳಗ್ಗೆ (ಸ್ಥಳೀಯ ಸಮಯ ಬೆಳಗ್ಗೆ 8:15) ಅಬ್ಬರಿಸಿದೆ. ಉಕ್ರೇನ್ ರಾಜಧಾನಿ ಕೀವ್ ಮೇಲೆ ಹಲವು ಡೆಡ್ಲಿ ರಾಕೆಟ್‌ಗಳು ಏಕಕಾಲಕ್ಕೆ ದಾಳಿ ನಡೆದಿದ್ದು, ಹಲವು ಕಟ್ಟಡಗಳನ್ನ ಉಡೀಸ್ ಮಾಡಿದೆ. ಕೀವ್ (Kyiv) ನಗರದ ಹಲವೆಡೆ ಹೊಗೆ, ಧೂಳಿನ ಅಬ್ಬರ ಹೆಚ್ಚಾಗಿದ್ದು, ಹಲವು ಕಟ್ಟಡಗಳು ನೆಲಸಮವಾಗಿವೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆ ಉಡೀಸ್ -ಕ್ರಿಮಿಯಾ ಸಂಪರ್ಕ ಕಡಿತ
Advertisement
Advertisement
ಉಕ್ರೇನ್ (Ukraine) ರಾಜಧಾನಿ ಕೀವ್ (Kyiv) ಮಾತ್ರವಲ್ಲ, ಲಿವ್, ತೆರ್ನೋಪಿಲ್ ಸೇರಿದಂತೆ ಹಲವು ನಗರಗಳ ಮೇಲೆ ರಾಕೆಟ್ ದಾಳಿ ನಡೆದಿದೆ. ಕೀವ್ ನಗರದಲ್ಲಿ ಭಾರೀ ಪ್ರಮಾಣದ ಸ್ಪೋಟದ ಸದ್ದು, ಹೊಗೆ, ಧೂಳು ಹಾಗೂ ಬೆಂಕಿ ತುಂಬಿಕೊಂಡಿದೆ. ಇದರಿಂದಾಗಿ ಕಿವ್ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸದ್ಯ ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ದಾಳಿಯ ಭಯಾನಕ ವೀಡಿಯೋಗಳು ಜಾಲತಾಣದಲ್ಲಿ (Social Media) ಹರಿದಾಡುತ್ತಿವೆ. ಕಿಲೋ ಮೀಟರ್ ದೂರದಲ್ಲಿ ನಿಂತವರಿಗೂ ಸ್ಫೋಟದ ದೃಶ್ಯ ಕಂಡುಬರುತ್ತಿದೆ. ಆದರೆ ಸ್ಫೋಟದಿಂದ ಜೀವ ಹಾನಿ ಆಗಿರುವ ಬಗ್ಗೆ ಈವರೆಗೆ ವರದಿ ಲಭ್ಯವಾಗಿಲ್ಲವಾದ್ರೂ ರಕ್ಷಣಾ ಕಾರ್ಯಾಚರಣೆ ಬಳಿಕವೇ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
Advertisement
ಸೇತುವೆ ಉಡೀಸ್ ಮಾಡಿದ್ದ ಉಕ್ರೇನ್:
ಕಳೆದ ಎರಡು ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕನಸಿನ ಕ್ರಿಮಿಯಾ – ರಷ್ಯಾ ಸಂಪರ್ಕಿಸುವ ಕ್ರಿಮಿಯಾ ಸೇತುವೆಯನ್ನು (Crimean Bridge) ಉಕ್ರೇನ್ ಉಡೀಸ್ ಮಾಡಿತ್ತು. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್‌ನ ಖೇರ್ಸನ್, ಝರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು.
ದಕ್ಷಿಣ ಉಕ್ರೇನ್ ಯುದ್ಧದಲ್ಲಿ ತೊಡಗಿಕೊಂಡಿರುವ ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನು ತಲುಪಿಸುವ ಪ್ರಮುಖ ಮಾರ್ಗ ಇದಾಗಿತ್ತು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 70ನೇ ವರ್ಷಕ್ಕೆ ಕಾಲಿಟ್ಟ ಮರುದಿನವೇ ಈ ಸ್ಫೋಟ ನಡೆದಿತ್ತು.
ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.