ಪ್ಯಾರಿಸ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆರು ಜನ ಅಂಗರಕ್ಷಕರೊಂದಿಗೆ ಶೌಚಾಲಯಕ್ಕೆ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ಯಾರಿಸ್‍ನಲ್ಲಿ ಉಕ್ರೇನ್ ಶೃಂಗಸಭೆ ನಡೆಯುತ್ತಿದ್ದು, ರಷ್ಯಾದ ಅಧ್ಯಕ್ಷ 76 ವರ್ಷದ ಪುಟಿನ್ ಕೂಡ ಭಾಗವಹಿಸಿದ್ದರು. ಪ್ಯಾರಿಸ್‍ನ ಎಲ್‍ಸಿ ಪ್ಯಾಲೇಸ್‍ನಲ್ಲಿ ಪುಟಿನ್ ಅವರು ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಅವರೊಂದಿಗೆ ಐವರು ಅಂಗರಕ್ಷಕರು ಶೌಚಾಲಯದ ಒಳಗೆ ಹೋಗಿದ್ದರೆ, ಒಬ್ಬ ಹೊರಗೆ ನಿಂತಿದ್ದರು.
Advertisement
Advertisement
ಶೌಚಾಲಯದಿಂದ ಪುಟಿನ್ ಹೊರಗೆ ಬರುವ ಮುನ್ನ ಮೂರು ಜನ, ಪುಟಿನ್ ಅವರ ಹಿಂದೆ ಇಬ್ಬರು ಹೊರ ಬಂದ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿತ್ತು. ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Advertisement
ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ನಾಲ್ಕು ದೇಶಗಳ ಮುಖ್ಯಸ್ಥರು ಭಾಗವಹಿಸಿದ್ದರು. ಅವರಲ್ಲಿ ವ್ಲಾಡಿಮಿರ್ ಪುಟಿನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ಸ್ಕಿ ವಿವಿಧ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.
Advertisement
So I’m counting 6 people accompanying Vladimir Putin to the toilet… pic.twitter.com/BjG5N5IpDR
— Jonah Fisher (@JonahFisherBBC) December 9, 2019
ವಿವಾದದಲ್ಲಿ ಭಾಗಿಯಾಗಿರುವ ಒತ್ತೆಯಾಳುಗಳನ್ನು ಉಭಯ ದೇಶಗಳು ಬಿಡುಗಡೆ ಮಾಡುವುದಾಗಿ ರಷ್ಯಾ ಮತ್ತು ಉಕ್ರೇನ್ ಒಪ್ಪಿಕೊಂಡಿವೆ. ಇದಲ್ಲದೆ, ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಉಕ್ರೇನ್‍ನ ಮೂರು ಪ್ರದೇಶಗಳಲ್ಲಿ ಮಿಲಿಟರಿ ಪಡೆಗಳನ್ನು ಕೊನೆಗೊಳಿಸುವುದಾಗಿಯೂ ರಷ್ಯಾ ಭರವಸೆ ನೀಡಿದೆ.