ತಾಯಿಗಾಗಿ ಔಷಧಿ ಹುಡುಕುತ್ತಾ ಹೊರಟ ಮಗಳು- ರಷ್ಯಾ ದಾಳಿಗೆ ಬಲಿ

Public TV
1 Min Read
ukraine 5

ಕೀವ್: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಔಷಧಿ ತರಲು ಹೋಗಿದ್ದ ಉಕ್ರೇನ್‍ನ ಮಹಿಳೆಯೊಬ್ಬರು ರಷ್ಯಾದ ದಾಳಿಗೆ ಸಾವನ್ನಪ್ಪಿದ್ದ ಘಟನೆ ನಡೆದಿದೆ.

ವಲೇರಿಯಾ ಮಕ್ಸೆಟ್ಸ್ಕಾ ಮೃತ ಮಹಿಳೆ. ಘಟನೆ ವೇಳೆ ಕಾರಿನಲ್ಲಿ ಚಲಿಸುತ್ತಿದ್ದ ವಲೇರಿಯಾ, ಚಾಲಕ ಯಾರೋಸ್ಲಾವ್ ಸಾವನ್ನಪ್ಪಿದ್ದಾರೆ. ವಲೇರಿಯಾ ವೈದ್ಯೆಯಾಗಿದ್ದರು. ಅವರಿಗೆ ಉಕ್ರೇನ್ ಬಿಟ್ಟು ಹೋಗುವ ಅವಕಾಶವಿದ್ದರೂ ಹೋಗಿರಲಿಲ್ಲ. ಉಕ್ರೇನ್‍ನಲ್ಲೇ ಉಳಿದುಕೊಂಡು ಅಲ್ಲಿನ ನಿವಾಸಿಗಳಿಗೆ ಸಹಾಯ ಮಾಡಲು ಯೋಚಿಸಿದ್ದರು.

Russia Ukraine War 4

ಆದರೆ ತಾಯಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಕೀವ್ ಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಯಿತು. ಇದರಿಂದ ಚಾಲಕನೊಂದಿಗೆ ವಲೇರಿಯಾ ಮತ್ತು ಅವರ ತಾಯಿ ಕೀವ್ ಬಿಟ್ಟು ಹೊರಟರು. ಆದರೆ ಕೀವ್‍ನ ಪಶ್ಚಿಮ ಮಾರ್ಗದಲ್ಲಿ ರಷ್ಯಾ ನಡೆಸಿದ ಗುಂಡಿನ ದಾಳಿಯಲ್ಲಿ ಇವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಲೇರಿಯಾ ಅವರು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‍ಮೆಂಟ್‍ನಲ್ಲಿ ಕೆಲಸ ಮಾಡಿದವರು. ಈ ಏಜೆನ್ಸಿ ಯುನೈಟೆಡ್ ಸ್ಟೇಟ್ಸ್ ಫೆಡರಲ್ ಸರ್ಕಾರದ ಸ್ವತಂತ್ರ ಸಂಸ್ಥೆಯಾಗಿದ್ದು, ವಿದೇಶಿ ನಾಗರಿಕರಿಗೆ ಸಹಾಯ ಮತ್ತು ಅಭಿವೃದ್ಧಿ ನೆರವು ನೀಡುವುದು ಇದರ ಜವಾಬ್ದಾರಿಯಾಗಿದೆ. ಇದನ್ನೂ ಓದಿ:  ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ: ಸಿದ್ದರಾಮಯ್ಯ

ಈ ಯುಎಸ್‍ಎ ಐಡಿಯ ಆಡಳಿತಾಧಿಕಾರಿ ಸಮಂತಾ ಪವರ್ ಅವರು ವಲೇರಿಯಾ ಸಾವನ್ನು ದೃಢಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ವಲೇರಿಯಾ 32ನೇ ವರ್ಷದ ಹುಟ್ಟಿದ ದಿನವಿತ್ತು. ತುಂಬಾ ಪ್ರತಿಭಾವಂತಳಾಗಿದ್ದಳು. ಅವಳ ಸಾವು ನೋವು ಕೊಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರಲು ಪುಟಿನ್‌ಗೆ ಝೆಲೆನ್ಸ್ಕಿ ಕರೆ

Share This Article
Leave a Comment

Leave a Reply

Your email address will not be published. Required fields are marked *