ಹುಬ್ಬಳ್ಳಿ: ಉಕ್ರೇನ್ ಯುದ್ಧ ಭೂಮಿಯಿಂದ ಮಗಳು ಇನ್ನೂ ಬಾರದ ಹಿನ್ನೆಲೆ ಆಕೆಯನ್ನು ನೆನೆದು ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಮಗಳ ಪೋಟೋ ಹಿಡಿದು ತಂದೆ-ತಾಯಿ, ಅಜ್ಜಿ-ತಾತ ತೀವ್ರ ಚಿಂತೆಗೆ ಒಳಗಾಗಿದ್ದಾರೆ.
ಉಕ್ರೇನ್ ಯುದ್ಧ ಪೀಡಿತ ಪ್ರದೇಶ ಖಾರ್ಕೀವ್‍ನಲ್ಲಿ ಹುಬ್ಬಳ್ಳಿಯ ವಿದ್ಯಾರ್ಥಿನಿ ಚೈತ್ರ ಸಂಶಿ ಸಿಲುಕಿದ್ದಾರೆ. ಖಾರ್ಕಿವ್‍ನಲ್ಲಿ ಎಂಬಿಬಿಎಸ್ ಓದುತ್ತಿದ್ದ ಚೈತ್ರ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ನಿವಾಸಿ. ನಿನ್ನೆ ಮಧ್ಯಾಹ್ನದಿಂದ ಚೈತ್ರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ
Advertisement
Advertisement
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚೈತ್ರ ಕುಟುಂಬ, ಎರಡು ದಿನದಿಂದ ನಮ್ಮ ಮಗಳು ಊಟ ಮಾಡಿಲ್ಲ. ಅಲ್ಲಿ ನೀರು ಸಹ ಸಿಗುತ್ತಿಲ್ಲ. ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ದಯವಿಟ್ಟು ನಮ್ಮ ಮಗಳನ್ನು ಹಾಗೂ ರಾಜ್ಯದ ವಿದ್ಯಾರ್ಥಿಗಳನ್ನು ಬೇಗ ಕರೆತನ್ನಿ ಎಂದು ಕೈಮುಗಿದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಬಾಂಬ್ ಸ್ಫೋಟವಾಗುತ್ತಿವೆ: ಪೋಷಕರ ಕಣ್ಣೀರು