ಉಕ್ರೇನ್‍ನಲ್ಲಿ ಊಟಕ್ಕಾಗಿ ಭಾರತೀಯರ ಪರದಾಟ, ಕುಡಿಯಲೂ ಸಿಗ್ತಿಲ್ಲ ನೀರು..!

Public TV
1 Min Read
Russia Ukraine War 2 1

ಹುಬ್ಬಳ್ಳಿ: ಉಕ್ರೇನ್‍ನಲ್ಲಿ ಊಟಕ್ಕಾಗಿ ಭಾರತೀಯರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೆ ಕುಡಿಯಲು ನೀರು ಕೂಡ ಅವರಿಗೆ ಸಿಗುತ್ತಿಲ್ಲ. ಹೀಗಾಗಿ ಕನ್ನಡಿಗರು ಕಣ್ಣೀರು ಹಾಕುತ್ತಾ ಕೈಮುಗಿದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

HBL

ಉಕ್ರೇನ್ ನಲ್ಲಿ ಸಿಲುಕಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನಾಝಿಲಾ ಅವರ ತಾಯಿ ನೂರ್ ಜಹಾನ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಮಗಳ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ. ಸರ್ಕಾರ ಆದಷ್ಟು ಬೇಗ ನಮ್ಮ ಮಕ್ಕಳನ್ನ ಸುರಕ್ಷಿತವಾಗಿ ಕರೆತರಲಿ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬೆಳಗಾವಿ ಯೋಧನ ಪುತ್ರಿ – ಮಗಳನ್ನು ರಕ್ಷಿಸುವಂತೆ ಪ್ರಧಾನಿ ಕೋರಿದ ಸೈನಿಕ

HBL e1645868527337
ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಇದೇ 9 ರಂದು ಹುಬ್ಬಳ್ಳಿಯ ಶಾಂತಿನಗರದ ನಿವಾಸಿ ನಾಝಿಲಾ ಉಕ್ರೇನ್‍ಗೆ ತೆರಳಿದ್ದರು. ಅಲ್ಲಿಗೆ ತೆರಳಿದ ಬಳಿಕ ನಾಝಿಲಾ ಅವರು ಕುಟುಂಬದ ಜೊತೆಗೆ ಕಳೆದೆರಡು ದಿನಗಳಿಂದ ಸಂಪರ್ಕದಲ್ಲಿದ್ದರು. ಆದರೆ ನಿನ್ನೆ 2 ಗಂಟೆಯಿಂದ ಸಂಪರ್ಕ ಕಡಿತಗೊಂಡಿದ್ದು, ಇದರಿಂದಾಗಿ ಕುಟುಂಬಕ್ಕೆ ದಿಕ್ಕು ದೋಚದಂತಾಗಿದೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

ಉಕ್ರೇನ್‍ನಲ್ಲಿ ಇಂಟರ್ನೆಟ್ ಸಮಸ್ಯೆಯಿಂದ ಸಂಪರ್ಕ ಕಡಿತವಾಗಿದೆ. ಹೀಗಾಗಿ ಮಗಳ ಜೊತೆಗೆ ಸಂಪರ್ಕ ಸಿಗದ ಕಾರಣ ಕುಟುಂಬ ಆತಂಕಕ್ಕೀಡಾಗಿದೆ.

Share This Article