ಯುದ್ಧ ನಿಲ್ಲಿಸುವಂತೆ ಲೈವ್ ವೇಳೆ ಸೆಟ್‍ಗೆ ಓಡಿ ಬಂದ ಮಹಿಳೆ- ಉಕ್ರೇನ್ ಅಧ್ಯಕ್ಷ ಧನ್ಯವಾದ

Public TV
2 Min Read
Ukraine Russia War

ಕೀವ್: ಟಿವಿಯಲ್ಲಿ ಲೈವ್ ಹೋಗುತ್ತಿರುವಾಗಲೇ ಸೆಟ್‍ಗೆ ಓಡಿ ಬಂದು, ಯುದ್ಧವನ್ನು ನಿಲ್ಲಿಸಿ ಎನ್ನುವ ಚಿಹ್ನೆಯೊಂದಿಗೆ ಮಹಿಳೆಯೊಬ್ಬರು ನಿಂತಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಷ್ಯಾದ ಸರ್ಕಾರಿ ಸ್ವಾಮ್ಯದ ಚಾನೆಲ್‍ವೊಂದರಲ್ಲಿ ಬುಲೆಟಿನ್ ಸಮಯದಲ್ಲಿ, ಯುದ್ಧ-ವಿರೋಧಿ ಚಿಹ್ನೆಯನ್ನು ಹಿಡಿದ ಮಹಿಳೆಯೊಬ್ಬರು ಸೆಟ್‍ಗೆ ಓಡಿ ಬಂದು ನಿರೂಪಕರ ಹಿಂದೆ ನಿಂತರು. ಯುದ್ಧ ಬೇಡ, ಯುದ್ಧವನ್ನು ನಿಲ್ಲಿಸಿ, ಪ್ರಚಾರವನ್ನು ನಂಬಬೇಡಿ, ಅವರು ಇಲ್ಲಿ ನಿಮಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಫಲಕವನ್ನು ಬರೆಯಲಾಗಿತ್ತು. ಇದನ್ನೂ ಓದಿ: ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂತಿರುಗಿ: ಮಾಳವಿಕಾ ಅವಿನಾಶ್

ಮಹಿಳೆಯನ್ನು ಮರೀನಾ ಒವ್ಸ್ಯಾನಿಕೋವಾ ಎಂದು ಗುರುತಿಸಲಾಗಿದ್ದು, ಬುಲೆಟಿನ್ ವೇಳೆ ಮಹಿಳೆ ಬಂದಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ. ಮತ್ತು ವರದಿಗಳ ಪ್ರಕಾರ ಪ್ರಸ್ತುತ ಆಕೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

ಈ ಹಿಂದೆ ಅವಳು ತನ್ನ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಳು. ಅದರಲ್ಲಿ ಅವಳು ರಷ್ಯಾದ ಆಕ್ರಮಣ ಅಪರಾಧವಾಗಿದೆ. ಪ್ರಚಾರಕ್ಕಾಗಿ ಕೆಲಸ ಮಾಡಿದ್ದಕ್ಕಾಗಿ ನಾಚಿಕೆಪಡುತ್ತೇನೆ. ಟೆಲಿವಿಷನ್ ಪರದೆ ಮೂಲಕವಾಗಿ ಸುಳ್ಳು ಹೇಳಲು ನನಗೆ ನಾಚಿಕೆಯಾಗುತ್ತಿದೆ. ರಷ್ಯನ್ನರನ್ನು ಸೋಮಾರಿಗಳಾಗಿ ಪರಿವರ್ತಿಸಲು ನಾನು ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ನಾಚಿಕೆಪಡುತ್ತೇನೆ ಎಂದು ಅವರು ಹೇಳಿದರು.

ಈ ಘಟನೆ ನಂತರ ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಕೂಡ ವೀಡಿಯೋ ಸಂದೇಶದಲ್ಲಿ ಧನ್ಯವಾದ ತಿಳಿಸಿದ್ದಾರೆ. ಸತ್ಯವನ್ನು ತಿಳಿಸಲು ಪ್ರಯತ್ನಿಸುವುದನ್ನು ನಿಲ್ಲಿಸದ ರಷ್ಯನ್ನರಿಗೆ ಕೃತಜ್ಞನಾಗಿದ್ದೇನೆ. ಯುದ್ಧದ ವಿರುದ್ಧ  ಪೋಸ್ಟ್‌ನೊಂದಿಗೆ ಬುಲೆಟಿನ್ ನಡೆಯುವಾಗ ಸ್ಟುಡಿಯೋಗೆ ಪ್ರವೇಶಿಸಿದ ಮಹಿಳೆಗೆ ವೈಯಕ್ತಿಕವಾಗಿ ಧನ್ಯವಾದ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *