ಕೀವ್: ಉಕ್ರೇನ್‍ನಲ್ಲಿ ಯುದ್ಧ ನಿಲ್ಲದಿದ್ದರೇ ಎಲ್ಲವೂ ಯುರೋಪ್‍ನ ವಿರುದ್ಧ ಹೋಗುತ್ತದೆ. ಆದ್ದರಿಂದ ಉಕ್ರೇನ್‍ಗೆ ಸಹಾಯ ಮಾಡುವುದರ ಮೂಲಕ ನಿಮಗೆ ಸಹಾಯ ಮಾಡಿಕೊಳ್ಳಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದರು.
ಯೂರೋಪ್ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಸ್ಕೋ ಪಡೆಗಳು ಬಾಂಬ್ ದಾಳಿಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ರಷ್ಯಾದ ಆಕ್ರಮಣಕಾರಿ ದಾಳಿಯನ್ನು ಎದುರಿಸಲು ಹೆಚ್ಚಿನ ಶಸ್ತ್ರಸ್ತ್ರಗಳ ಅಗತ್ಯವಿದೆ ಎಂದು ಮನವಿ ಮಾಡಿದರು.
ಪಾಶ್ಚಿಮಾತ್ಯ ರಾಷ್ಟ್ರಗಳು ಒದಗಿಸಿದ ಶಸ್ತ್ರಾಸ್ತ್ರಗಳು ಮತ್ತು ಇತರೆ ಆಧುನಿಕ ತಂತ್ರಾಂಶಗಳನ್ನು ಉಕ್ರೇನ್‍ನ ಮಿಲಿಟರಿ ವೇಗವಾಗಿ ಬಳಸುತ್ತಿದೆ. ಇದರಿಂದಾಗಿ ಕೀವ್‍ನಲ್ಲಿ ರಷ್ಯಾ ಮತ್ತು ಉಕ್ರೇನ್‍ನ ಹೋರಾಟ ತೀವ್ರವಾಗಿದೆ ಎಂದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ
ರಷ್ಯಾದ ಬಾಂಬ್ ದಾಳಿಯಿಂದಾಗಿ ಅಪಾರ್ಟ್‍ಮೆಂಟ್‍ಗಳು ಹೊತ್ತಿ ಉರಿಯುತ್ತಿದೆ. ನಾಗರಿಕರ ಮೇಲೂ ದಾಳಿನಡೆಯುತ್ತಿದೆ. ದಿನೇ ದಿನೇ ರಷ್ಯಾ ದಾಳಿಗೆ ನಾಗರಿಕರು ಸಾವನ್ನಪ್ಪಿರುವ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದಾಗಿ ಇಡೀ ನಗರವೇ ಯುದ್ಧದಿಂದ ಕೋಲಾಹಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ತಡರಾತ್ರಿ ಕಾರು ಅಪಘಾತ- ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ