ಬೀದರ್: ಉಕ್ರೇನ್‍ನಿಂದ ಬಂದು ಪೋಷಕರು ಹಾಗೂ ಬೀದರ್ ಜನರನ್ನು ನೋಡುತ್ತೇನೆ ಅಂದುಕೊಂಡಿರಲಿಲ್ಲ ಎಂದು ಉಕ್ರೇನ್‍ನಲ್ಲಿ ಸಿಲುಕಿದ್ದ ಬಸವಕಲ್ಯಾಣಕ್ಕೆ ವಿದ್ಯಾರ್ಥಿನಿ ವೈಷ್ಣವಿ ತಿಳಿಸಿದರು.
ಉಕ್ರೇನ್‍ನಿಂದ ಬಸವ ಕಲ್ಯಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬೀದರ್‌ಗೆ ಬರುತ್ತೇನೆ ಅಂದುಕೊಂಡಿರಲಿಲ್ಲಾ. ಸದ್ಯ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು.
Advertisement
Advertisement
ನಮ್ಮ ತಂದೆ ಕೃಷಿಕರಾದರು. ನನ್ನ ಆಸೆಯಂತೆ ಎಂಬಿಬಿಎಸ್ ಮಾಡಲು ಉಕ್ರೇನ್‍ಗೆ ಕಳಿಸಿದ್ದರು. ಆದರೆ ನಾನು ಉಕ್ರೇನ್‍ಗೆ ಹೋದ ಮೂರು ತಿಂಗಳಲ್ಲಿ ಈ ರೀತಿ ಪರಿಸ್ಥಿತಿ ಬಂತು. ರಷ್ಯಾದಿಂದ ಅತಿ ಹೆಚ್ಚು ದಾಳಿಯಾದ ಉಕ್ರೇನ್‍ನ ಖಾರ್ಕಿವ್‍ನಲ್ಲೆ ನಾವು ಇದ್ದೆವು. ಆದರೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಹಾಯದಿಂದ ನಾವು ಭಾರತಕ್ಕೆ ತಲುಪಲು ಸಾಧ್ಯವಾಯಿತು. ಈ ಸಮಯದಲ್ಲಿ ಪ್ರಧಾನಿ ಮೋದಿಯವರು ಪುಟಿನ್ ಜೊತೆ ಮಾತನಾಡಿ ನಮಗೆ ತೊಂದರೆಯಾಗದಂತೆ ನೋಡಿಕೊಂಡರು ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ
Advertisement
Advertisement
ಉಕ್ರೇನ್‍ನಲ್ಲಿದ್ದ ವೇಳೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಾಸಕರು, ತಹಶೀಲ್ದಾರ್ ಅವರು ನಿರಂತರ ಸಂಪರ್ಕದಲ್ಲಿ ಇದ್ದರು ಎಂದ ಅವರು, ನಮ್ಮ ಸ್ನೇಹಿತರು ಇನ್ನೂ ಅಲ್ಲೇ ಇದ್ದಾರೆ. ಅವರು ಸುರಕ್ಷಿತವಾಗಿ ಬಂದರೆ ಅವರ ಪೋಷಕರಿಗೆ ಖುಷಿಯಾಗುತ್ತದೆ ಎಂದರು. ಇದನ್ನೂ ಓದಿ : ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ