ಕೀವ್: ಉಕ್ರೇನ್ ಮೇಲೆ ರಷ್ಯಾ ಸೈನಿಕರ ಆಕ್ರಮಣ ದಾಳಿ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಉಕ್ರೇನ್ನ ಎರಡನೇ ಅತಿ ದೊಡ್ಡ ನಗರ ಕರ್ಕಿವ್ನಲ್ಲಿರುವ ಗ್ಯಾಸ್ ಪೈಪ್ಲೈನ್ ಅನ್ನು ರಷ್ಯಾ ಸೇನೆ ಸ್ಫೋಟಿಸಿದೆ.
Advertisement
ಈ ವಿಚಾರವನ್ನು ಉಕ್ರೇನ್ ಅಧ್ಯಕ್ಷರ ಕಚೇರಿ ಅಧಿಕೃತವಾಗಿ ತಿಳಿಸಿದೆ. ಸ್ಫೋಟದ ಪರಿಣಾಮ ಆಯಿಲ್ ಟ್ಯಾಂಕ್ ಸ್ಫೋಟಗೊಂಡು ಆಗಸದಲ್ಲಿ ದೊಡ್ಡ ಅಣಬೆಯಾಕಾರದ ಮೋಡ ಆವರಿಸಿಕೊಂಡಿದೆ. ಇದು ಪರಿಸರಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಲಿದೆ ಎಂದು ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.
Advertisement
https://twitter.com/WW32022/status/1497721984339349512
Advertisement
ನಗರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಮನೆ ಕಿಟಕಿಗಳನ್ನು ಬಟ್ಟೆಯಲ್ಲಿ ಮುಚ್ಚಬೇಕು. ಜೊತೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸುವಂತೆ ಉಕ್ರೇನ್ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಅಪ್ಪ-ಅಮ್ಮ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ, ನನ್ನ ಬಗ್ಗೆ ಯೋಚಿಸ್ಬೇಡಿ- ಯೋಧನ ಭಾವುಕ ವೀಡಿಯೋ ವೈರಲ್
Advertisement
https://twitter.com/WW32022/status/1497758655407665165
ಕರ್ಕಿವ್ ನಗರದಲ್ಲಿ ಉಕ್ರೇನ್ ಹಾಗೂ ರಷ್ಯಾ ಸೇನೆಗಳ ನಡುವೆ ಭಾರೀ ಯುದ್ಧ ನಡೆಯುತ್ತಿದೆ ಎಂದು ತಿಳಿದುಬಂದಿದೆ. ರಷ್ಯಾ ಗಡಿಯಿಂದ ಈ ನಗರ 40 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿ ಸುಮಾರು 15 ಲಕ್ಷ ಜನರು ವಾಸಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಕರೆ ಮಾಡಿ ರಾಜಕೀಯ ಬೆಂಬಲ ಕೋರಿದ ಉಕ್ರೇನ್ ಅಧ್ಯಕ್ಷ
A huge explosion was heard in #Kyiv #Ukraine. A white flash in the skies over #Kyiv was also seen in live feed . pic.twitter.com/Z6onxyIUpM
— Zeitung (@Himat75) February 26, 2022