ಉಕ್ರೇನ್‍ನಲ್ಲಿ ಸಿಲುಕಿದ ಭಾರತೀಯರನ್ನು ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸಿ: ರಾಹುಲ್ ಗಾಂಧಿ

Public TV
2 Min Read
rahul gandhi

ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿದ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದರು.

ಟ್ವೀಟ್ ಮಾಡಿ, ಉಕ್ರೇನ್‍ನ ಖಾರ್ಕಿವ್‍ನಲ್ಲಿ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿ ನವೀನ್‍ಗೆ ಸಂತಾಪ ಸೂಚಿಸಿದರು. ಭಾರತೀಯ ವಿದ್ಯಾರ್ಥಿ ನವೀನ್ ಉಕ್ರೇನ್‍ನಲ್ಲಿ ಸಾವನ್ನಪ್ಪಿರುವುದು ದುರಂತವಾಗಿದೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಭಾರತ ಸರ್ಕಾರ ಉಕ್ರೇನ್‍ನಲ್ಲಿ ಸಿಲುಕಿರುವವರನ್ನು ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸಿ. ಪ್ರತಿ ನಿಮಿಷವೂ ಅಮೂಲ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜ್ಞಾನಗೌಡರ ಕುಟುಂಬ ಹಾಗೂ ಸ್ನೇಹಿತರಿಗೆ ಕಾಂಗ್ರೆಸ್ ಸಂತಾಪ ಸೂಚಿಸಿದೆ. ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರವನ್ನು ತ್ವರಿತಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಇದನ್ನೂ ಓದಿ: ಸ್ಮಾರ್ಟ್‍ಫೋನ್, ಟ್ಯಾಬ್ ವಿತರಿಸಲು ಎಸ್‍ಪಿಯಿಂದ ತಡೆ: ಯೋಗಿ ಕಿಡಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ವಿದ್ಯಾರ್ಥಿಯ ಸಾವಿಗೆ ಸಂತಾಪ ಸೂಚಿಸಿದ್ದು, ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಆದಷ್ಟು ಬೇಗ ವಾಪಸ್ ಕರೆತರುವಂತೆ ಸರ್ಕಾರವನ್ನು ಕೋರಿದ್ದಾರೆ.

NAVEEN

ಉಕ್ರೇನ್‍ನಲ್ಲಿ ಹಾವೇರಿ ಮೂಲದ ನವೀನ್ ಮೃತಪಟ್ಟಿದ್ದಾರೆ. 4ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಒಂದು ವಾರದಿಂದ ಬಂಕರ್‌ನಲ್ಲಿದ್ದರು. ಆದರೆ ನಿನ್ನೆ ರೈಲ್ವೆ ಸ್ಟೇಷನ್ ಮೂಲಕ ಹೊರಗೆ ಬಂದಿದ್ದಾನೆ. ಏರ್‌ಸ್ಟ್ರೈಕ್ ವೇಳೆ ಶೆಲ್ ಬಡಿದು ಅವರು ಸಾವನ್ನಪ್ಪಿದ್ದಾರೆ. ನವೀನ್ ಜೊತೆಗೆ ಅವರ ಊರಿನವರೇ ಇನ್ನಿಬ್ಬರು ಸ್ನೇಹಿತರಿದ್ದರು. ಅದರಲ್ಲಿ ಚಳ್ಳಗೆರೆಯ ಓರ್ವನಿಗೆ ಗಾಯವಾಗಿದೆ. ಇನ್ನೊಬ್ಬರಿಗೆ ಅದೃಷ್ಟವಶಾತ್ ಏನೂ ಆಗಿಲ್ಲ. ವಿದೇಶಾಂಗ ಇಲಾಖೆ ನವೀನ್ ಸಾವನ್ನು ದೃಢಪಡಿಸಿತ್ತು. ಇದನ್ನೂ ಓದಿ: ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್‌ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ಕರೆ

Share This Article
Leave a Comment

Leave a Reply

Your email address will not be published. Required fields are marked *