ಮೈಸೂರು: ತನ್ನ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಕೋನದಲ್ಲಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ಹೀಗಾಗಿ ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗಾರರೊಂದಿಎಗ ಮಾತನಾಡಿದ ಅವರು, ನೆಹರು ಕಾಂಗ್ರೆಸ್ ನವರು ನಮಗೆ ವಿದೇಶಾಂಗ ನೀತಿ ಬಗ್ಗೆ ಪಾಠ ಹೇಳುತ್ತಿದ್ದಾರೆ. ಅವರ ಆಡಳಿತದ ವಿದೇಶಾಂಗ ನೀತಿ ಹೇಗೆ ಇತ್ತು. ಅದರಿಂದ ದೇಶಕ್ಕೆ ಆದ ನಷ್ಟ ಎಷ್ಟು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಕಾಂಗ್ರೆಸ್ ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ. ಚೀನಾ ಟಿಬೆಟ್ ಕಬಳಿಸಿದ್ದಾಗ ಸುಮ್ಮನೆ ಇದ್ದ ಕಾಂಗ್ರೆಸ್ ಈಗ ವಿದೇಶಾಂಗ ನೀತಿಯ ಪಾಠ ನಮಗೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೀವಂತ ಇದ್ದವ್ರನ್ನೇ ತರೋದು ಕಷ್ಟವಿದ್ದು, ನವೀನ್ ಶವ ತರುವುದು ಇನ್ನೂ ಡಿಫಿಕಲ್ಟ್: ಬೆಲ್ಲದ್
Advertisement
Advertisement
ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ. ತನ್ನ ಭದ್ರತೆ, ಸುರಕ್ಷತೆ ದೃಷ್ಟಿಕೋನದಲ್ಲಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ರಷ್ಯಾದ ಮೇಲೆ ಭಾರತ ಅತಿ ಹೆಚ್ಚು ಅವಲಂಬಿತವಾಗಿದೆ. ಈ ಅವಲಂಬನೆಗೆ ಸೃಷ್ಟಿಸಿದ್ದು ಕಾಂಗ್ರೆಸ್. ರಷ್ಯಾವನ್ನು ಎದುರು ಹಾಕಿಕೊಂಡರೆ ಮುಂದೆ ನಮಗೆ ಯುದ್ಧದಂತಹ ಸಂದರ್ಭ ಸೃಷ್ಟಿಯಾದರೆ ರಷ್ಯಾ ನಮ್ಮ ನೆರವಿಗೆ ಬರುತ್ತಾ?. ಹೀಗಾಗಿ ಪ್ರಧಾನಿಗಳು ಈಗ ತಟಸ್ಥ ನಿಲುವಿಗೆ ಬಂದಿದ್ದಾರೆ.ಅಲ್ಲಿನ ಎಲ್ಲಾ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ವ್ಯವಸ್ಥಿತವಾಗಿ ಸಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
Advertisement
Advertisement
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ನೀಟ್ ಬ್ಯಾನ್ ಕ್ಯಾಂಪೈನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ನೀಟ್ ತರಲಾಗಿದೆ. 138 ಕೋಟಿ ಜನಸಂಖ್ಯೆ ದೇಶಕ್ಕೆ, ಒಂದೂವರೆ ಲಕ್ಷ ಮೆಡಿಕಲ್ ಸೀಟ್ ಇದೆ. ಇದರಿಂದ ಪೈಪೋಟಿ ಹೆಚ್ಚಾಗಿದೆ. ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜ್ ಬರಬೇಕು. ಆಗ ಸೀಟ್ ಹೆಚ್ಚಾಗುತ್ತೆ. ಎಲ್ಲರಿಗೂ ಅವಕಾಶ ಸಿಗುತ್ತೆ. ಉಕ್ರೇನ್‍ನಲ್ಲಿ ಓದುವುದಕ್ಕೆ ಹೋಗಿರುವವರು ಕೂಡ ಬುದ್ಧಿವಂತರು ಎಂದರು. ಇದನ್ನೂ ಓದಿ: ಯುದ್ಧ ನಿಲ್ಲಿಸಿ ಅಂತ ಪುಟಿನ್‌ಗೆ ನಾವು ಹೇಳಬಹುದೇ: ಸಿಜೆಐ ಪ್ರಶ್ನೆ
ನವೀನ್ ಸಾವಿನ ಹಿನ್ನೆಲೆಯಲ್ಲಿ ಕೆಲವರು ಮೀಸಲಾತಿ ವಿರುದ್ಧ ಕೆಲವರು ಮಾತಾಡುತ್ತಿದ್ದಾರೆ. ಪ.ಜಾತಿ, ಪ. ಪಂಗಡ ಎಷ್ಟೋ ವರ್ಷ ಶೋಷಣೆಗೆ ಒಳಗಾಗಿದೆ. ಅವರಿಗೆ ಮೀಸಲಾತಿ ಕೊಟ್ಟಿರುವುದರಲ್ಲಿ ಯಾವ ತಪ್ಪು ಇಲ್ಲ. ಜಾತಿ ತಾರತಮ್ಯ ನಿವಾರಣೆಯಾಗಿ ಸಮಾಜ ಜಾತಿ ಬಂಧನದಿಂದ ಹೊರ ಬರುವವರೆಗೂ ಮೀಸಲಾತಿ ಇರುತ್ತೆ. ಮೀಸಲಾತಿ ಇವತ್ತು ಇರುತ್ತೆ ಮುಂದೆಯೂ ಇರುತ್ತೆ. ಯಾರದ್ದೋ ಮನೆಯ ಗಂಟು ತಂದು ಅವರಿಗೆ ಕೊಡುತ್ತಿದ್ದೇವೆ ಎನ್ನುವ ರೀತಿ ಮಾತಾಡಬೇಡಿ. ಶೋಷಣೆ ಒಳಗಾದ ಸಹೋದರರಿಗೆ ಮೀಸಲಾತಿ ಕೊಡುತ್ತಿದ್ದೇವೆ. ಇದರಲ್ಲಿ ತಪ್ಪು ಏನಿದೆ ಎಂದು ಸಂಸದರು ಪ್ರಶ್ನಿಸಿದರು.