ರಷ್ಯಾದಿಂದ ಬಿಡುಗಡೆಯಾದ ಸೈನಿಕನ ಆಘಾತಕಾರಿ ಚಿತ್ರ ಹಂಚಿಕೊಂಡ ಉಕ್ರೇನ್

Public TV
2 Min Read
Ukraine Soldier

ಕೀವ್: ರಷ್ಯಾದಿಂದ (Russia) ಬಂಧಿತನಾಗಿದ್ದ ತನ್ನ ಸೈನಿಕನ (Soldier) ಆಘಾತಕಾರಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಉಕ್ರೇನ್ (Ukraine) ರಕ್ಷಣಾ ಸಚಿವಾಲಯ ಹಂಚಿಕೊಂಡಿದೆ.

ಹಲವು ತಿಂಗಳಿಂದ ರಷ್ಯಾ ಉಕ್ರೇನ್ ಯುದ್ಧ ನಡೆಯುತ್ತಿದೆ. ಈ ಭೀಕರ ಯುದ್ಧದಲ್ಲಿ ಸೈನಿಕರು, ಜನರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಯುದ್ಧದ ಸಂದರ್ಭದಲ್ಲಿ ಅನೇಕ ರಷ್ಯಾ ಯೋಧರು ಯುಕ್ರೇನ್ ಅವರ ಕೈಯಲ್ಲಿ, ಉಕ್ರೇನ್ ಯೋಧರು ರಷ್ಯಾ ಕೈಯಲ್ಲಿ ಸೆರೆಯಾಗಿದ್ದಾರೆ.

Ukraine War

ಇದೀಗ ಉಕ್ರೇನ್ ರಕ್ಷಣಾ ಸಚಿವಾಲಯವು ಇಂತಹದ್ದೇ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಉಕ್ರೇನ್ ಸೈನಿಕ ಮೈಖೈಲೋ ಡಯಾನೋವ್ ಎಂಬಾತನನ್ನು ರಷ್ಯಾ ಸೈನಿಕರಿಗೆ ಸೆರೆಯಾಗಿದ್ದ. ಈತ ಈಗ ಬಿಡುಗಡೆ ಹೊಂದಿದ್ದಾನೆ. ಆದರೆ ಆತ ನೋಡಲು ಪರಿಚಯವೇ ಸಿಗದಷ್ಟು ಬದಲಾವಣೆ ಹೊಂದಿದ್ದಾನೆ. ಇದನ್ನೂ ಓದಿ: ಸೇನೆಯನ್ನು ಭಾಗಶಃ ಸಜ್ಜುಗೊಳಿಸಿ – ಅಣ್ವಸ್ತ್ರ ಬಳಕೆಯ ಸುಳಿವು ನೀಡಿದ ಪುಟಿನ್

ಟ್ವೀಟ್‍ನಲ್ಲಿ ಏನಿದೆ?: ಉಕ್ರೇನ್ ಈಗ ಆತನ ಮೊದಲ ಫೋಟೋ ಹಾಗೂ ಈಗಿನ ಫೋಟೋವನ್ನು ಹಂಚಿಕೊಂಡಿದೆ. ಉಕ್ರೇನ್ ಸೈನಿಕ ಮೈಖೈಲೋ ಡಯಾನೋವ್ ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ರಷ್ಯಾದಿಂದ ಬಂಧಿತರಾಗಿದ್ದರು. ಆದರೆ ರಷ್ಯಾದಿಂದ ಬದುಕುಳಿದವರಲ್ಲಿ ಒಬ್ಬರಾಗಿದ್ದಾರೆ. ನಾಜಿಸಂನ ನಾಚಿಗೇಡಿನ ಪರಂಪರೆಯನ್ನು ರಷ್ಯಾ ಈ ರೀತಿಯಾಗಿ ಮುಂದುವರಿಸುತ್ತಿದೆ ಎಂದು ಟ್ವೀಟ್‍ನಲ್ಲಿ ಉಕ್ರೇನ್ ತಿಳಿಸಿದೆ.

ಈಗಿನ ಫೋಟೋದಲ್ಲಿ ಮೈಖೈಲೋ ಡಯಾನೋವ್ ನೋಡಲು ತುಂಬಾ ಸಣ್ಣಾಗಾಗಿದ್ದು, ಆತನ ಮುಖ ಹಾಗೂ ಕೈಗೆ ಗಾಯಗಳಾಗಿವೆ. ಈತನ ಸ್ಥಿತಿ ಗಂಭೀರವಾಗಿದ್ದು, ಕೀವ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ

Russia Ukraine War 2

ಈ ವರ್ಷದ ಆರಂಭದಲ್ಲಿ ಮೈಖೈಲೋ ಡಯಾನೋವ್ ಮಾರಿಯುಪೋಲ್‍ನಲ್ಲಿ ಅಜೋವ್‍ಸ್ಟಾಲ್ ಸ್ಟೀಲ್ ಕೆಲಸವನ್ನು ರಕ್ಷಿಸಲು ಹೋರಾಡಿದ್ದನು. ಈ ವೇಳೆ ಆತ ರಷ್ಯಾ ಕೈಗೆ ಸರೆಸಿಕ್ಕಿದ್ದನು. ಇದೀಗ ರಷ್ಯಾದಿಂದ ಬಿಡುಗೆಯಾದ 205 ಉಕ್ರೇನಿನವರಲ್ಲಿ ಈತನು ಒಬ್ಬನಾಗಿದ್ದಾನೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *