InternationalLatestLeading NewsMain Post

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸಂಚರಿಸುತ್ತಿದ್ದ ಕಾರು ಅಪಘಾತ

ಕೀವ್: ಉಕ್ರೇನ್ ಅಧ್ಯಕ್ಷ (Ukraine President) ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zlenskyy) ಸಂಚರಿಸುತ್ತಿದ್ದ ಕಾರು (Car) ರಾಷ್ಟ್ರ ರಾಜಧಾನಿ ಕೀವ್‍ನಲ್ಲಿ (Kyiv) ಅಪಘಾತಕ್ಕೀಡಾಗಿದೆ.

ರಷ್ಯಾ-ಉಕ್ರೇನ್ (Russia -Ukraine) ನಡುವೆ ನಡೆಯುತ್ತಿರುವ ಯದ್ಧಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಝೆಲೆನ್ಸ್ಕಿ ವಾಪಸ್ ಆಗುತ್ತಿದ್ದಾಗ ಅಪಘಾತ ಸಂಭವಿಸಿದೆ. ರಷ್ಯಾ ವಿರುದ್ಧ ಹೋರಾಡಿ ಉಕ್ರೇನ್ ಸೈನಿಕರು ಇಜಿಯಮ್ ನಗರವನ್ನು ಮತ್ತೆ ವಶಪಡಿಕೊಂಡ ಬಳಿಕ ಝೆಲೆನ್ಸ್ಕಿ ಅಲ್ಲಿಗೆ ಭೇಟಿ ನೀಡಿ ವಾಪಸ್ ಆಗುತ್ತಿದ್ದಾಗ ಕೀವ್‌ನ ಖಾರ್ಕಿವ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಯುದ್ಧದ ನಡುವೆ ಫೋಟೋಶೂಟ್ ಮಾಡಿಸಿಕೊಂಡ ಝೆಲೆನ್ಸ್ಕಿ ದಂಪತಿ – ಸೈನಿಕರ ಸಾವಿನ ನಡುವೆ ಶೋಕಿ ಎಂದ ನೆಟ್ಟಿಗರು

ಝೆಲೆನ್ಸ್ಕಿ ಸಂಚರಿಸುತ್ತಿದ್ದ ಕಾರಿಗೆ ನಾಗರೀಕರು ಸಂಚರಿಸುತ್ತಿದ್ದ ವಾಹನವೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳೊಂದಿಗೆ ಝೆಲೆನ್ಸ್ಕಿ ಮತ್ತು ಅಂಗರಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಘಟನಾ ಸ್ಥಳದಿಂದ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇದನ್ನೂ ಓದಿ: ಟೇಕ್ ಆಫ್ ಆಗುವ ಮೊದಲೇ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‍ನಲ್ಲಿ ಬೆಂಕಿ

ಝೆಲೆನ್ಸ್ಕಿ ಕಾರು ಪಘಾತಕ್ಕೀಡಾಗಿ ಯಾವುದೇ ಅಪಾಯ ಸಂಭವಿಸಿಲ್ಲ. ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಿಗೆ ವಕ್ತಾರ ಸೆರ್ಗಿ ನಿಕಿಫೊರೊವ್  (Sergii Nikiforov) ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆಗೆ ನಿರ್ದೇಶಿಸಲಾಗಿದೆ ಎಂದರು.

Live Tv

Leave a Reply

Your email address will not be published.

Back to top button