ಕೀವ್: ಉಕ್ರೇನ್‍ನ ಖಾರ್ಕಿವ್‍ನಲ್ಲಿ ಮಂಗಳವಾರ ನಡೆದ ರಷ್ಯಾದ ಶೆಲ್ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿರೋಧಿಸಿದ್ದಾರೆ. ಈ ದಾಳಿಯನ್ನು ಯುದ್ಧಾಪರಾಧ ಎಂದು ಕರೆದಿದ್ದಾರೆ.
ಖಾರ್ಕಿವ್‍ನಲ್ಲಿ ನಡೆದ ರಷ್ಯಾದ ಶೆಲ್ ದಾಳಿಯನ್ನು ಯುದ್ಧಾಪರಾಧ ಎಂದು ವಿರೋಧಿಸಿದ ಝೆಲೆನ್ಸ್ಕಿ ಉಕ್ರೇನ್‍ನ ರಾಜಧಾನಿ ಕೀವ್ ಅನ್ನು ರಕ್ಷಿಸುವುದು ರಷ್ಯಾ ಪಡೆಯ ಪ್ರಮುಖ ಆದ್ಯತೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
Advertisement
ಖಾರ್ಕಿವ್ ಮೇಲಿನ ದಾಳಿ ಯುದ್ಧಾಪರಾಧ. ಖಾರ್ಕಿವ್ ಹಾಗೂ ಕೀವ್, ರಷ್ಯಾದ ಮುಖ್ಯ ಗುರಿಯಾಗಿದೆ. ಇದೀಗ ಖಾರ್ಕಿವ್‍ನಲ್ಲಿ ಘಟಿಸಿರುವ ದುರಂತದಂತೆ ರಾಜಧಾನಿಯಲ್ಲೂ ದಾಳಿ ನಡೆಸುವುದು ರಷ್ಯಾದ ಗುರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ
Advertisement
Advertisement
ಮಂಗಳವಾರ ಖಾರ್ಕಿವ್‍ನಲ್ಲಿರುವ ಸರ್ಕಾರಿ ಪ್ರಧಾನ ಕಛೇರಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿ ಭಾರೀ ಹಾನಿಯನ್ನು ಮಾಡಿದೆ. ಶೆಲ್ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಸೇರಿದಂತೆ ಒಟ್ಟು 17 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು
Advertisement
2ನೇ ಮಹಾಯುದ್ಧದ ಅಂತ್ಯದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್‍ನ ಖಾರ್ಕಿವ್ ಹಾಗೂ ಕೀವ್ ನಗರಗಳ ಮೇಲೆ ಬಾಂಬ್ ದಾಳಿ ನಡೆದಿದೆ. ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿ 1 ವಾರದಿಂದ ದೇಶಾದ್ಯಂತ ದಾಳಿ ನಡೆಸುತ್ತಿದೆ.