ಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಶಿಕ್ಷೆಯಾಗಿ ವಿದೇಶಿ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ರಷ್ಯಾದ ವಿಮಾನ ಹಾಗೂ ಹಡಗುಗಳನ್ನು ಜಾಗತಿಕವಾಗಿ ನಿಷೇಧಿಸಬೇಕು ಎಂದು ಉಕ್ರೇನ್‍ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒತ್ತಾಯಿಸಿದರು.
ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಅವರು, ನಾವು ಎಲ್ಲಾ ಬಂದರು, ಕಾಲುವೆ ಹಾಗೂ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ರಷ್ಯಾ ಪ್ರವೇಶಿಸದಂತೆ ಮುಚ್ಚಬೇಕು ಎಂದು ಒತ್ತಾಯಿಸಿದ ಅವರು, ರಷ್ಯಾದ ಕ್ಷಿಪಣಿಗಳು, ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಸಂಚರಿಸದಂತೆ ನಿರ್ಬಂಧ ಹೇರಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು.
Advertisement
Advertisement
ರಷ್ಯಾ ಕದನ ವಿರಾಮದ ನೆಪದಲ್ಲಿ ಮಾತುಕತೆ ನಡೆಸುತ್ತಿದ್ದಾಗ ಕೀವ್‍ನ್ನು ಅತಿಕ್ರಮಿಸಲು ಉಕ್ರೇನ್ ಮೇಲೆ ಬಾಂಬ್ ದಾಳಿ ಹಾಗೂ ಗುಂಡಿನ ದಾಳಿ ಮಾಡಿದೆ ಎಂದು ಆರೋಪಿಸಿದ ಅವರು, ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಝೆಲೆನ್ಸ್ಕಿ ರಷ್ಯಾ ನಾಯಕರಿಗೆ ವೀಡಿಯೋ ಸಂದೇಶದಲ್ಲಿ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ- ಇಂದು, ನಾಳೆ ಬೆಂಗಳೂರು ಲಾಕ್ ಪಕ್ಕಾ
Advertisement
Advertisement
ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಫೋನ್ ಸಂವಾದ ನಡೆಸಿದರು. ಈ ವೇಳೆ ರಷ್ಯಾದ ಗಡಿಯ ಸಮೀಪವಿರುವ ಉಕ್ರೇನ್‍ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‍ನಲ್ಲಿ ರಷ್ಯಾದ ದಾಳಿಯಿಂದ ಕನಿಷ್ಠ 11 ಜನರು ಸಾವನ್ನಪ್ಪಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಉದ್ಯೋಗ ನೀಡಲು ಸಮಾಜವಾದಿ ಪಕ್ಷ ಬದ್ಧ : ಅಖಿಲೇಶ್ ಯಾದವ್
ರಷ್ಯಾದ ದಾಳಿಗೆ ಉಕ್ರೇನ್ ತತ್ತರಿಸಿದ್ದು, ಈವರೆಗೆ 14 ಮಕ್ಕಳು ಸೇರಿದಂತೆ ರಷ್ಯಾ ದಾಳಿಯಲ್ಲಿ 350ಕ್ಕೂ ಅಧಿಕ ನಾಗರಿಕರು ಸಾವನ್ನಪ್ಪಿದ್ದಾರೆ.