ಕೀವ್: ರಷ್ಯಾ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್(EU) ಅಭ್ಯರ್ಥಿ ಸ್ಥಾನ ನೀಡಿದೆ. ಯುರೋಪಿಯನ್ ಯೂನಿಯನ್ ನಾಯಕರು ಗುರುವಾರ ಉಕ್ರೇನ್ ಹಾಗೂ ಮಾಲ್ಡೋವಾಗೆ ಅಭ್ಯರ್ಥಿ ಸ್ಥಾನವನ್ನು ನೀಡಿದ್ದಾರೆ.
ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ 4 ದಿನಗಳ ಬಳಿಕ ಫೆಬ್ರವರಿ 28ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶಕ್ಕೆ ತಕ್ಷಣವೇ ಒಕ್ಕೂಟದ ಸದಸ್ಯ ಸ್ಥಾನ ನೀಡುವಂತೆ ಕೋರಿಕೊಂಡಿದ್ದರು. ಬಳಿಕ ಉಕ್ರೇನ್‌ಗೆ ಅಭ್ಯರ್ಥಿ ಸ್ಥಾನ ನೀಡಬೇಕೆಂದು ಜೂನ್ 17ರಂದು ಯುರೋಪಿಯನ್ ಕಮಿಷನ್ ಶಿಫಾರಸು ಮಾಡಿತ್ತು. ಇದೀಗ ಉಕ್ರೇನ್ ಇಯುನ ಅಭ್ಯರ್ಥಿಯಾಗಿದೆ. ಇದನ್ನೂ ಓದಿ: ಸಾರ್ವಜನಿಕವಾಗಿ ಗನ್ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್
ಈ ಬಗ್ಗೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ತಮ್ಮ ದೇಶ ಹಾಗೂ ಮಾಲ್ಡೋವಾ ಮೇಲಿನ EU ನಿರ್ಧಾರ ಅನನ್ಯ ಹಾಗೂ ಐತಿಹಾಸಿಕ ಕ್ಷಣ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ
ಉಕ್ರೇನ್ ಭವಿಷ್ಯ ಇದೀಗ EU ನಲ್ಲಿದೆ. ಇನ್ನು ನಮಗೆ ನೆಮ್ಮದಿ ಸಿಗಬಹುದು ಅಥವಾ ಸಿಗದೇ ಹೋಗಬಹುದು. ಆದರೂ ನಾವಿನ್ನು ಗೆಲ್ಲುತ್ತೇವೆ ಹಾಗೂ ದೇಶವನ್ನು ಪುನರ್ ನಿರ್ಮಾಣ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.