ವಾಷಿಂಗ್ಟನ್: ರಷ್ಯಾ ದಾಳಿಯಿಂದ ಮೂಲಸೌಕರ್ಯ ರಕ್ಷಿಸಿಕೊಳ್ಳಲು, ರಷ್ಯಾ ಸೈನ್ಯದ ವಿರುದ್ಧ ಸೈಬರ್ ಬೇಹುಗಾರಿಕೆ ಕಾರ್ಯಾಚರಣೆಗಳನ್ನು ನಡೆಸಲು ಉಕ್ರೇನ್ ಸರ್ಕಾರವು ದೇಶದ ಭೂಗತ ಹ್ಯಾಕರ್‌ಗಳಿಂದ ಸ್ವಯಂಸೇವಕರನ್ನು ಕೇಳುತ್ತಿದೆ.
ರಷ್ಯಾದ ಪಡೆಗಳು ಉಕ್ರೇನ್ ನಗರಗಳ ಮೇಲೆ ದಾಳಿ ಮಾಡುತ್ತಿದ್ದಂತೆ, ಸ್ವಯಂಸೇವಕರಿಗೆ ನಿನ್ನೆ ಹ್ಯಾಕರ್ ಫೋರಮ್‍ಗಳಲ್ಲಿ ಕಾಣಿಸಿಕೊಳ್ಳಲು ಗೂಗಲ್ ಮೂಲಕ ತಿಳಿಸಲಾಗಿದೆ. ದಾಳಿ ಹಿನ್ನೆಲೆ ಅನೇಕ ನಿವಾಸಿಗಳು ರಾಜಧಾನಿ ಕೀವ್ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ಸಿದ್ಧ: ವಿಶ್ವ ಬ್ಯಾಂಕ್
ಉಕ್ರೇನಿಯನ್ ಸೈಬರ್ ಸಮುದಾಯ, ನಮ್ಮ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಸಮಯವಾಗಿದೆ ಎಂದು ಉಕ್ರೇನ್ ಪೋಸ್ಟ್ ಮಾಡಿದೆ. ಹ್ಯಾಕರ್‍ಗಳು ಮತ್ತು ಸೈಬರ್ ಸೆಕ್ಯುರಿಟಿ ಪರಿಣಿತರನ್ನು ಗೂಗಲ್ ಡಾಕ್ಸ್ ಮೂಲಕ ಅಪ್ಲಿಕೇಶನ್ ಸಲ್ಲಿಸಲು ಕೇಳಿದೆ.
ಕೀವ್‍ನಲ್ಲಿರುವ ಸೈಬರ್ ಸೆಕ್ಯುರಿಟಿ ಕಂಪನಿಯ ಸಹ-ಸಂಸ್ಥಾಪಕ ಯೆಗೊರ್ ಔಶೇವ್ ಅವರನ್ನು ನಿನ್ನೆ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಈ ವೇಳೆ ಅವರು ಸೈಬರ್ ರಕ್ಷಣೆ ಬಗ್ಗೆ ಪೋಸ್ಟ್ ಮಾಡುವಂತೆ ಕೋರಿಕೊಂಡಿದ್ದು, ಇದನ್ನು ಬರೆದಿದ್ದಾರೆ ಎಂದು ರಾಯಿಟರ್ಸ್‍ಗೆ ತಿಳಿಸಿದರು. ಇದನ್ನೂ ಓದಿ: Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?
ಔಶೇವ್ ಅವರ ಸಂಸ್ಥೆಯ ಸೈಬರ್ ಯೂನಿಟ್ ಟೆಕ್ನಾಲಜೀಸ್ ನಿರ್ಣಾಯಕ ಮೂಲಸೌಕರ್ಯಗಳ ರಕ್ಷಣೆಯಲ್ಲಿ ಉಕ್ರೇನ್ ಸರ್ಕಾರದೊಂದಿಗೆ ಕೆಲಸ ಮಾಡಲು ಹೆಸರುವಾಸಿಯಾಗಿದೆ.