– ಯುವತಿಯರಲ್ಲೇ ಹೆಚ್ಚಾಗಿ ಕಂಡುಬರುತ್ತಂತೆ ಈ ಕಾಯಿಲೆ
ಲಂಡನ್: ಮೂತ್ರವನ್ನು ಆಗಾಗ್ಗೆ ದೇಹದಿಂದ ಹೊರ ಹಾಕುವುದು ಬಹಳ ಮುಖ್ಯ. ಮೂತ್ರ ಕಟ್ಟಿಕೊಂಡರೆ ಆರೋಗ್ಯದಲ್ಲಿ (Health) ಸಮಸ್ಯೆ ಉಂಟಾಗುತ್ತದೆ. ಕೆಲವರು ಹಗಲಿನಲ್ಲಿ ಪದೇ-ಪದೇ ಮೂತ್ರ ವಿಸರ್ಜನೆ ಮಾಡಿದರೆ, ಕೆಲವರು ರಾತ್ರಿ ವೇಳೆ ಈ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ (UK Woman) ಬರೋಬ್ಬರಿ 1 ವರ್ಷ 2 ತಿಂಗಳ ಕಾಲ ಮೂತ್ರ ವಿಸರ್ಜನೆಗೇ ಹೋಗಿಲ್ಲವಂತೆ.
View this post on Instagram
ಹೌದು… ಇಂಗ್ಲೆಂಡ್‌ನ (England) ಮಹಿಳೆಯೊಬ್ಬಳು ಬರೋಬ್ಬರಿ 14 ತಿಂಗಳ ಕಾಲ ಮೂತ್ರ ವಿಸರ್ಜನೆಗೇ ಹೋಗಿಲ್ಲವಂತೆ. ತಪಾಸಣೆಯ ಬಳಿಕ ಯುಕೆ ವೈದ್ಯರು (UK Doctors) ಇದಕ್ಕೆ ಕಾರಣವೇನೆಂಬುದನ್ನು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ – ಸಾಮರ್ಥ್ಯ ಎಷ್ಟಿದೆ ಗೊತ್ತಾ?
ಹೌದು.. 30 ವರ್ಷ ವಯಸ್ಸಿನ ಮಹಿಳೆ ಎಲ್ಲೆ ಆಡಮ್ಸ್‌ಗೆ 2020ರ ಅಕ್ಟೋಬರ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನು ಫೌಲರ್ಸ್ ಸಿಂಡ್ರೋಮ್ (Fowlers Syndrome) ಎಂದು ಕರೆಯುತ್ತಾರೆ. ಈ ಕಾಯಿಲೆ ಮೂತ್ರಕೋಶವನ್ನು ಖಾಲಿ ಮಾಡಲಾಗದ ಅಸಮರ್ಥತೆ ಉಂಟುಮಾಡುತ್ತದೆ. ಈ ಕಾಯಿಲೆ ಯುವತಿಯರಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ಈ ಸಿಂಡ್ರೋಮ್‌ನಿಂದಾಗಿ ಆಡಮ್ಸ್ ಎಷ್ಟೇ ನೀರು ಅಥವಾ ಇತರ ದ್ರವ ಕುಡಿದರೂ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿರಲ್ಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಸ್ಲಿಮರಿಗೆ ತೊಂದರೆಕೊಡುವ ಉದ್ದೇಶದಿಂದ ಮೀಸಲಾತಿಯಲ್ಲಿ ದ್ರೋಹ – ಸಿದ್ದು ಸಿಡಿಮಿಡಿ
ನಂತರ ಆಡಮ್ಸ್ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ರೋಗಲಕ್ಷಣಗಳನ್ನು ವಿವರಿಸಿ ಚಿಕಿತ್ಸೆ ಪಡೆಯಲು ನಿರ್ಧರಿಸಿದರು. ವೈದ್ಯರು ಆಕೆಯ ದೇಹವನ್ನು ಕೂಲಕುಂಷವಾಗಿ ಪರಿಶೀಲನೆ ನಡೆಸಿ, ಆಕೆಯ ಮೂತ್ರಕೋಶದಲ್ಲಿ ಒಂದು ಲೀಟರ್ ಮೂತ್ರವಿದೆ ಎಂದು ತಿಳಿಸಿದರು. ಸಾಮಾನ್ಯವಾಗಿ ಮೂತ್ರಕೋಶವು ಮಹಿಳೆಯರಲ್ಲಿ 500 ಮಿಲಿ ಮತ್ತು ಪುರುಷರಲ್ಲಿ 700 ಮಿಲಿ ಮೂತ್ರವನ್ನು ಮಾತ್ರ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಹೀಗಾಗಿ ವೈದ್ಯರ ತಂಡ ತಕ್ಷಣ ಟ್ಯೂಬ್ ಮೂಲಕ ಮೂತ್ರವನ್ನು ಹೊರತೆಗೆಯುವ ಕೆಲಸ ಮಾಡಿತು.
ಒಂದು ವಾರದ ನಂತರ ಮೂತ್ರಶಾಸ್ತ್ರ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಆಡಮ್ಸ್ ಅವರಿಗೆ ಸ್ವಯಂ-ಟ್ಯೂಬ್ ಮೂಲಕ ಮೂತ್ರ ತೆಗೆಯುವುದು ಹೇಗೆಂದು ಕಲಿಸಿ ಮನೆಗೆ ಕಳುಹಿಸಲಾಯಿತು. ಇದೀಗ ಮಹೀಳೆ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಡಮ್ಸ್, ನನಗೆ ಮೊದಲು ಮೂತ್ರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಂತರದ ದಿನಗಳಲ್ಲಿ ಎಷ್ಟು ನೀರು ಕುಡಿದರೂ ಮೂತ್ರ ಬರುವ ಅನುಭವ ಆಗುವುದೇ ನಿಂತು ಹೋಯಿತು. ಬಳಿಕ ನಾನು ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆದುಕೊಂಡೆ. ಇದೀಗ ನಾನು ಅತ್ಯಂತ ಆರೋಗ್ಯವಂತಳಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.