ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

Public TV
2 Min Read
UK women Sleeping Beauty

ಲಂಡನ್: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ನಿತ್ಯ ನಿಯಮಿತ ಪ್ರಮಾಣದಲ್ಲಿ ನಿದ್ರೆ ಮಾಡುವುದು ಅಗತ್ಯ. ದಿನಕ್ಕೆ 8 ಗಂಟೆ ನಿದ್ರೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡುವುದು ಕಾಮನ್.‌ ಹೀಗಿದ್ದೂ ಕೆಲಸದ ಒತ್ತಡ, ಬದಲಾದ ಜೀವನ ಶೈಲಿ ಕಾರಣಕ್ಕೆ ಎಷ್ಟೋ ಮಂದಿ ಸರಿಯಾಗಿ ನಿದ್ರೆ ಮಾಡುವುದು. ಆದ್ರೆ ಕೆಲವರು ಸೋಂಬೇರಿಗಳಂತೆ ಹೆಚ್ಚಿನ ಸಮಯ ನಿದ್ರೆ ಮಾಡುತ್ತಾರೆ. ಆದರೆ ಯುಕೆನಲ್ಲಿ ಮಹಿಳೆಯೊಬ್ಬರು ನಿದ್ರೆ ಮಾಡುವ ಸಮಯ ಕೇಳಿದ್ರೆ ನೀವು ಶಾಕ್‌ ಆಗ್ತೀರಾ!

ಇಂಗ್ಲೆಂಡ್‌ನಲ್ಲಿ (England) 38 ವಯಸ್ಸಿನ ಮಹಿಳೆಯೊಬ್ಬರು ದಿನ 24 ಗಂಟೆಯಲ್ಲಿ 22 ಗಂಟೆಗಳ ಕಾಲ ನಿದ್ರೆ ಮಾಡ್ತಾರೆ. ಇಷ್ಟು ಸಮಯ ನಿದ್ರೆ ಮಾಡುವ ಅಸಮಾನ್ಯ ಸಾಮರ್ಥ್ಯ ಹೊಂದಿರುವ ಈ ಮಹಿಳೆ ʼಸ್ಲೀಪಿಂಗ್‌ ಬ್ಯೂಟಿʼ (Sleeping Beauty) ಎಂದೇ ಹೆಸರಾಗಿದ್ದಾರೆ. ಮಹಿಳೆಗಿರುವ ವಿಶೇಷ ಕಾಯಿಲೆಯೇ ಈಕೆ ನಿತ್ಯ ಹೀಗೆ 22 ಗಂಟೆಗಳ ಕಾಲ ನಿದ್ರೆ ಮಾಡುವುದಕ್ಕೆ ಪ್ರಮುಖ ಕಾರಣವಂತೆ. ಇದನ್ನೂ ಓದಿ: ಸುಂದರಿಯ ದೇಹವನ್ನು ತುಂಡಾಗಿ ಕತ್ತರಿಸಿ, ತಲೆಯನ್ನು ಸೂಪ್ ಮಾಡಲು ಇಟ್ಟಿದ್ರು..!

uk women sleep

ಅಂದಹಾಗೆ, ಈಕೆ ಹೆಸರು ಜೊವಾನ್ನಾ ಕಾಕ್ಸ್. ಇಂಗ್ಲೆಂಡ್‌ನ ವೆಸ್ಟ್ ಕ್ಯಾಸಲ್‌ಫೋರ್ಡ್‌ನಲ್ಲಿ ವಾಸವಾಗಿದ್ದಾರೆ. ಹಾಗಾದ್ರೆ ಈಕೆಗಿರುವ ವಿಶೇಷ ಕಾಯಿಲೆಯಾದರೂ ಏನು ಅಂತಾ ಕೇಳ್ತೀರಾ? ಈ ಕಾಯಿಲೆ ಹೆಸರು ʼಇಡಿಯೋಪಥಿಕ್ ಹೈಪರ್ಸೋಮ್ನಿಯಾʼ ಅಂತಾ. 2021 ರಲ್ಲಿ ಅವರಿಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ಇದರಿಂದ ಜನರಿಗೆ ಹಗಲಿನಲ್ಲೂ ನಿದ್ರೆಯ ತೀವ್ರತೆ ಹೆಚ್ಚಾಗಿರುತ್ತದೆ. ಆಗಾಗ್ಗೆ ಎಚ್ಚರಗೊಳ್ಳಲು ಹೆಣಗಾಡುತ್ತಾರೆ.

“ಒಮ್ಮೆ ಮಲಗಿದ ಮೇಲೆ ನನ್ನನ್ನು ಎಬ್ಬಿಸಲು ಸಾಧ್ಯವಿಲ್ಲ. ನಾನು ಎಚ್ಚರಗೊಂಡಾಗ ಎಷ್ಟು ಸಮಯ ನಿದ್ರೆ ಮಾಡಿದೆ ಎಂಬುದೇ ತಿಳಿಯುವುದಿಲ್ಲ. ಒಮ್ಮೊಮ್ಮೆ ನಾನು ಎಚ್ಚರಗೊಳ್ಳದೇ ಸತತ ನಾಲ್ಕು ದಿನ ನಿದ್ರೆ ಮಾಡಿದ್ದೇನೆ. ಇದು ನನ್ನ ಜೀವನವನ್ನೇ ಹಾಳು ಮಾಡುತ್ತಿದೆ” ಎಂದು ಕಾಕ್ಸ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ʼಲೇಡಿ ಅಲ್‌ ಖೈದಾʼ ಕರೆತರಲು ಪಾಕ್‌ ಸರ್ಕಾರಕ್ಕೆ ಒತ್ತಾಯ – 13 ವರ್ಷಗಳಿಂದ ಅಮೆರಿಕ ಜೈಲಲಿದ್ದಾಳೆ ಪಾಕ್‌ ಸುಂದರಿ

ಈಕೆ ಪ್ರೊಟೀನ್ ಶೇಕ್‌ಗಳು ಮತ್ತು ಪೋಷಕಾಂಶಯುಕ್ತ ಊಟದಿಂದ ಬದುಕುಳಿದಿದ್ದಾರೆ. ಏಕೆಂದರೆ ಹೆಚ್ಚಿನ ಸಮಯ ನಿದ್ರೆಯಲ್ಲೇ ಇದ್ದಾಗ ದೇಹಕ್ಕೆ ಅಗತ್ಯ ಪೋಷಕಾಂಶದ ಕೊರತೆ ಹೆಚ್ಚು ಬಾಧಿಸಬಹುದು.

Share This Article
Leave a Comment

Leave a Reply

Your email address will not be published. Required fields are marked *