ಲಂಡನ್: ಕಿಂಗ್ ಚಾರ್ಲ್ಸ್ (King Charles) ಮತ್ತು ಕ್ಯಾಮಿಲ್ಲಾ ಅವರ ಮೇಲೆ ಮೊಟ್ಟೆಗಳನ್ನು (EGG) ಎಸೆದಿದ್ದ ವಿದ್ಯಾರ್ಥಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ನವೆಂಬರ್‌ನಲ್ಲಿ ಉತ್ತರ ಇಂಗ್ಲೆಂಡ್‌ನಲ್ಲಿ ರಾಜ ಮತ್ತು ರಾಣಿ ಇಬ್ಬರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಈ ಯಾರ್ಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿ (Student) ಪ್ಯಾಟ್ರಿಕ್ ಥೆಲ್ವೆಲ್ (23) ಎಂಬಾತ ಬ್ರಿಟಿಷ್ ರಾಜ ರಾಣಿಯ ಮೇಲೆ ಮೊಟ್ಟೆಗಳನ್ನು ಎಸೆದಿದ್ದ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಮೇಲೆ ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆಯ ಆರೋಪ ಹೊರಿಸಿ ಪ್ಯಾಟ್ರಿಕ್‌ನನ್ನು ಬಂಧಿಸಲಾಗಿತ್ತು.
Advertisement
Advertisement
ಘಟನೆಗೆ ಸಂಬಂಧಿಸಿದಂತೆ ಯಾರ್ಕ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ನಡೆಸಿತ್ತು. ಕಿಂಗ್ ಚಾರ್ಲ್ಸ್‌ನ ಮೇಲೆ ಮೊಟ್ಟೆಗಳನ್ನು ಎಸೆದ ನಂತರ ಅಪರಾಧವು ಸಾಬೀತಾದ ಹಿನ್ನೆಲೆಯಲ್ಲಿ ಯುಕೆ ವಿದ್ಯಾರ್ಥಿಗೆ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
Advertisement
ಚಾರ್ಲ್ಸ್‌ಗೆ 4 ಮೊಟ್ಟೆಗಳನ್ನು ಎಸೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಚಾರ್ಲ್ಸ್ ವಿಚಲಿತರಾಗದೇ ಕಾರ್ಯಕ್ರಮವನ್ನು ಮುಂದುವರಿಸಿದರು. ಈ ವೇಳೆ ಬ್ರಿಟಿಷ್ ರಾಜನ ವಿರುದ್ಧ ಘೋಷಣೆ ಕೂಗುತ್ತಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಕೇಂದ್ರ ಸಲಹೆ
Advertisement
ಇಂಗ್ಲೆಂಡ್ ರಾಜಮನೆತನವು ಈ ರೀತಿಯ ಅಹಿತಕರ ಘಟನೆಯನ್ನು ಅನುಭವಿಸಿರುವುದು ಇದೇ ಮೊದಲಲ್ಲ. 2002ರಲ್ಲಿ ರಾಣಿ ಎಲಿಜಬೆತ್ 2 ನಾಟಿಂಗ್‌ಹ್ಯಾಮ್‌ಗೆ ಭೇಟಿ ನೀಡಿದಾಗ, ಅವರ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿತ್ತು. 1995ರಲ್ಲಿ ರಾಜನ ಮೇಲೆ ಮೊಟ್ಟೆಗಳನ್ನು ಎಸೆದಿದ್ದರು. ಇದನ್ನೂ ಓದಿ: ಶಬರಿಮಲೆ ಹಾದಿಯಲ್ಲಿ ಈ ಬಾರಿ 23 ಮಂದಿ ಹೃದಯಾಘಾತದಿಂದ ಸಾವು