ಲಂಡನ್: ಭಾರತ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಬ್ರಿಟಿಷ್ ಕಾಶ್ಮೀರಿ ಪ್ರಾಧ್ಯಾಪಕಿಯೊಬ್ಬರ ಸಾಗರೋತ್ತರ ಪೌರತ್ವ (OCI) ರದ್ದುಗೊಳಿಸಲಾಗಿದೆ.
ಭಾರತದ ಅಧಿಕಾರಿಗಳನ್ನು ನನ್ನ ಸಾಗರೋತ್ತರ ಪೌರತ್ವವನ್ನು ರದ್ದುಗೊಳಿಸಿದ್ದಾರೆಂದು ಪ್ರೊ.ನಿತಾಶಾ ಕೌಲ್ ಆರೋಪಿಸಿದ್ದಾರೆ. ಭಾರತ ಸರ್ಕಾರದಿಂದ ಬಂದಿರುವ ಮಾಹಿತಿಯ ವಿವರಗಳನ್ನು ನಿತಾಶಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದಲ್ಲಿ ದ್ವೇಷದ ವಿರುದ್ಧ ಮಾತನಾಡಿದ ಶಿಕ್ಷಣ ತಜ್ಞರನ್ನು ಬಂಧಿಸುವುದು, ಭಾರತದ ಹೊರಗಿನ ಶಿಕ್ಷಣ ತಜ್ಞರಿಗೆ ದೇಶ ಮತ್ತು ಕುಟುಂಬದ ಬಾಂಧವ್ಯ ತಪ್ಪಿಸಲಾಗುತ್ತಿದೆ ಎಂದು ಎಕ್ಸ್‌ನಲ್ಲಿ ಪ್ರಾಧ್ಯಾಪಕಿ ಪೋಸ್ಟ್ ಹಾಕಿದ್ದಾರೆ.
ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ನಿಗದಿಪಡಿಸಿದ OCI ನಿಯಮಗಳ ಅಡಿಯಲ್ಲಿ, ಭಾರತ ಸರ್ಕಾರವು ಯಾವುದೇ ವ್ಯಕ್ತಿಯ OCI ನೋಂದಣಿಯನ್ನು ಕೆಲವು ನಿರ್ದಿಷ್ಟ ಆಧಾರದ ಮೇಲೆ ರದ್ದುಗೊಳಿಸಬಹುದು ಎಂದಿದೆ.
ಭಾರತ ಸರ್ಕಾರದಿಂದ ಸ್ವೀಕರಿಸಲಾಗಿದೆ ಎಂದು ಹೇಳಲಾದ ರದ್ದತಿ ದಾಖಲೆಯಲ್ಲಿ, ಕೌಲ್ ಅವರು ಭಾರತದ ಸಾರ್ವಭೌಮತ್ವದ ವಿಷಯಗಳಲ್ಲಿ ಭಾರತ ಮತ್ತು ಅದರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ವಿವಿಧ ಅಂತರರಾಷ್ಟ್ರೀಯ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವಾರು ಪ್ರತಿಕೂಲ ಬರಹಗಳು, ಭಾಷಣಗಳು ಮತ್ತು ಪತ್ರಿಕೋದ್ಯಮ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾನಿಲಯದ ಪ್ರಜಾಪ್ರಭುತ್ವ ಅಧ್ಯಯನ ಕೇಂದ್ರದ ನಿರ್ದೇಶಕಿ ನಿತಾಶಾ ಕೌಲ್, ಅಲ್ಪಸಂಖ್ಯಾತ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಖಂಡಿಸಿದ್ದಕ್ಕಾಗಿ OCI ರದ್ದತಿ ಮೂಲಕ ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದ್ದಾರೆ.