ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆ ರೇಸ್‌ನಲ್ಲಿ (UK PM Polls) ಮಾಜಿ ಹಣಕಾಸು ಸಚಿವ ರಿಷಿ ಸುನಾಕ್ (Rishi Sunak) ಮುನ್ನಡೆ ಕಾಯ್ದುಕೊಂಡಿದ್ದು, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಪೆನ್ನಿ ಮೊರ್ಡಂಟ್ (Penny Morduant) ಅವರಿಗೆ ಪಕ್ಷದ ಸದಸ್ಯರಿಂದಲೇ ಒತ್ತಡ ಹೇರಲಾಗುತ್ತಿದೆ.
ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೋರಿಸ್ ಜಾನ್ಸನ್ ಭಾನುವಾರ ಘೋಷಿಸಿದ್ದರಿಂದ ರಿಷಿ ಸುನಾಕ್ ಬ್ರಿಟನ್‌ನ ಮುಂದಿನ ಪ್ರಧಾನಿಯಾಗಲಿದ್ದಾರೆ ಎನ್ನಲಾಗಿತ್ತು. ಈಗ ಸುನಾಕ್‌ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಪ್ರತಿಸ್ಪರ್ಧಿ ಮೊರ್ಡಂಟ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಪಕ್ಷದ ಸದಸ್ಯರಿಂದ ಒತ್ತಡ ಕೇಳಿಬಂದಿದೆ. ಒಂದು ವೇಳೆ ಮೊರ್ಡಂಟ್ ಸ್ಪರ್ಧೆಯಿಂದ ಹಿಂದೆ ಸರಿದರೆ ರಿಷಿ ಸುನಾಕ್ ಮುಂದಿನ ಪ್ರಧಾನಿಯಾಗಲಿದ್ದಾರೆ. ಯುಕೆಯ ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರೊಬ್ಬರು ಪ್ರಧಾನಿಯಾದರೆಂಬ ಇತಿಹಾಸ ಕೂಡ ಸೃಷ್ಟಿಯಾಗಲಿದೆ. ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ – ರಿಷಿ ಸುನಾಕ್ ಘೋಷಣೆ
Advertisement
Advertisement
ಮೊರ್ಡಂಟ್ ಅವರು 100 ಸಂಸದರ ಬೆಂಬಲ ಪಡೆಯುವಲ್ಲಿ ವಿಫಲರಾದರೆ ರಿಷಿ ಸುನಾಕ್ ಅವರೇ ಮುಂದಿನ ಪ್ರಧಾನಿಯಾಗಲಿದ್ದಾರೆ. ಭಾರತೀಯ ಕಾಲಮಾನದಲ್ಲಿ ಇಂದು ಸಂಜೆ 6:30ರ ಹೊತ್ತಿಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
Advertisement
Advertisement
ಈಗಾಗಲೇ ಸುನಾಕ್ ಅವರಿಗೆ 150 ಸದಸ್ಯರ ಬೆಂಬಲ ವ್ಯಕ್ತವಾಗಿದ್ದು, ಮೊರ್ಡಂಟ್ ಅವರು ಕೇವಲ 25 ಸದಸ್ಯರ ಬೆಂಬಲ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೋಲು ಬಹುತೇಕ ಖಚಿತ ಎನ್ನಲಾಗಿದೆ. ಇಂದು ಸಂಜೆಯೊಳಗೆ ಮೊರ್ಡಂಟ್ ಅವರು 100 ಸದಸ್ಯರ ಬೆಂಬಲ ಸಾಬೀತುಪಡಿಸಿದರೆ, ಪ್ರಧಾನಿ ಹುದ್ದೆಗಾಗಿ ಸುನಾಕ್ ಜೊತೆಗೆ ಹಣಾಹಣೆ ನಡೆಸಲಿದ್ದಾರೆ. ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು