ಗಾಂಧೀನಗರ: ಗುಜರಾತ್‍ನ ಅಹಮದಾಬಾದ್‍ನಲ್ಲಿರುವ ಗಾಂಧೀಜಿ ಅವರ ಸಬರಮತಿ ಆಶ್ರಮಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಬೆಳಗ್ಗೆ ಭೇಟಿ ನೀಡಿ ಚರಕ ಹಿಡಿದು ನೂಲು ತೆಗೆಯಲು ಪ್ರಯತ್ನಿಸಿದರು.
Advertisement
ಮಹಾತ್ಮಾ ಗಾಂಧಿ ಅವರ ಆಶ್ರಮದಲ್ಲಿನ ಆಟೋಗ್ರಾಫ್ ಪುಸ್ತಕದಲ್ಲಿ ಬೋರಿಸ್ ಜಾನ್ಸನ್ ಅವರು ಒಂದು ಚಿಕ್ಕ ಟಿಪ್ಪಣಿಯನ್ನು ಬರೆದಿದ್ದಾರೆ. ಈ ಅಸಾಮಾನ್ಯ ವ್ಯಕ್ತಿಯ ಆಶ್ರಮಕ್ಕೆ ಬರಲು ಮತ್ತು ಜಗತ್ತನ್ನು ಉತ್ತಮವಾಗಿ ಬದಲಾಯಿಸಲು ಅವರು ಸತ್ಯ ಮತ್ತು ಅಹಿಂಸೆಯಂತಹ ಸರಳವಾದ ತತ್ವಗಳನ್ನು ಹೇಗೆ ಸಿದ್ಧಗೊಳಿಸಿದರು ಎಂಬುದನ್ನು ತಿಳಿದುಕೊಳ್ಳುವುದೇ ದೊಡ್ಡ ಸೌಭಾಗ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭೂಮಿಯ ಯಾವುದೇ ಭಾಗ ತಲುಪಬಲ್ಲ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷಿಸಿದ ರಷ್ಯಾ
Advertisement
#WATCH | Prime Minister of the United Kingdom Boris Johnson visits Sabarmati Ashram, tries his hands on ‘charkha’ pic.twitter.com/6RTCpyce3k
— ANI (@ANI) April 21, 2022
Advertisement
ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಕಾಲ ಭಾರತದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಗುರುವಾರ ದಿನವಿಡೀ ಗುಜರಾತ್‍ನಲ್ಲಿದ್ದು ಸಂಜೆ ದೆಹಲಿಗೆ ತೆರಳಲಿದ್ದಾರೆ. ಶುಕ್ರವಾರ ಪ್ರಧಾನಿ ಮೋದಿಯವರೊಂದಿಗೆ ವಿಸ್ತೃತ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ಮೊಸಳೆ ಬಾಯಲ್ಲಿ ನಿಮ್ಮ ಕಾಲಿರುವಾಗ, ಅದರೊಂದಿಗೆ ಮಾತನಾಡಲು ಹೇಗೆ ಸಾಧ್ಯ: ಬೋರಿಸ್ ಜಾನ್ಸನ್