ಲಂಡನ್: ಕಚ್ಚಾ ತೈಲ, ಅನಿಲಕ್ಕಾಗಿ ರಷ್ಯಾದ ಅವಲಂಬನೆಯಿಂದ ಹೊರಬರುವಂತೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ವಿಶ್ವಕ್ಕೆ ಕರೆ ನೀಡಿದ್ದಾರೆ.
Advertisement
ಬೋರಿಸ್ ಜಾನ್ಸನ್, ಗಲ್ಫ್ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಈ ವೇಳೆ ಮಾತನಾಡಿ, ಉಕ್ರೇನ್ ಮೇಲಿನ ರಷ್ಯಾದ ಅತಿಕ್ರಮಣ ವಿರುದ್ಧ ಪ್ರತಿಭಟಿಸಲು ಅಲ್ಲಿನ ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು. ರಷ್ಯಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿಹಾಕುವ ಪ್ರಯತ್ನಕ್ಕೆ ಸೌದಿ ಅರೇಬಿಯಾ, ಯುಎಇ ರಾಷ್ಟ್ರಗಳು ಪ್ರಮುಖ ಭಾಗಿದಾರರು. ಈ ರಾಷ್ಟ್ರಗಳೊಂದಿಗೆ ಪ್ರಾದೇಶಿಕ ಭದ್ರತೆ, ಮಾನವೀಯ ಪರಿಹಾರ, ಜಾಗತಿಕ ಇಂಧನ ಮಾರುಕಟ್ಟೆ ನಿಯಂತ್ರಣದ ವಿಚಾರವಾಗಿ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಜಾನ್ಸನ್ ಹೇಳಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ
Advertisement
Advertisement
ಅಬುಧಾಬಿ, ರಿಯಾದ್ ಮುಖಂಡರನ್ನು ಭೇಟಿ ಮಾಡಲಿರುವ ಜಾನ್ಸನ್ ಅವರು ಉಕ್ರೇನ್ ಸಂಘರ್ಷ ಸೇರಿದಂತೆ ಪ್ರಾದೇಶಿಕ ಭದ್ರತೆ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ರಷ್ಯಾ, ಉಕ್ರೇನ್ ಮೇಲೆ ನಡೆಸಿದ ದಾಳಿ ಪರಿಣಾಮ ಜಾಗತಿಕ ಇಂಧನ ಮತ್ತು ಆಹಾರ ಉತ್ಪನ್ನಗಳ ಬೆಲೆ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.