ಲಂಡನ್: ಬ್ರಿಟನ್ ಸಂಸತ್ ಭವನದ ಬಳಿ ಉಗ್ರನೊಬ್ಬ ಬುಧವಾರದಂದು ದಾಳಿಗೆ ಯತ್ನ ನಡೆಸಿದ್ದಾನೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Advertisement
ಕಾರ್‍ನಲ್ಲಿ ದಾಳಿ ಮಾಡುತ್ತಾ ಬಂದು ಸಂಸತ್ ಭವನಕ್ಕೆ ನುಗ್ಗಲು ಯತ್ನಿಸಿದ ಉಗ್ರನನ್ನ ಭದ್ರತಾ ಪಡೆಯವರು ಹೊಡೆದುರುಳಿಸಿದ್ದಾರೆ. ಇದಕ್ಕೂ ಮುನ್ನಾ ಲಂಡನ್‍ನ ಸಂಸತ್ ಭವನ ಪಕ್ಕದಲ್ಲಿನ ಥೇಮ್ಸ್ ನದಿಗೆ ಅಡ್ಡಲಾಗಿ ಕಟ್ಟಿರೋ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಸಿಕ್ಕಸಿಕ್ಕವರ ಮೇಲೆ ಕಾರ್ ಹತ್ತಿಸಿಕೊಂಡು ಉಗ್ರ ಬಂದಿದ್ದ. ಬಳಿಕ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ಪಕ್ಕದಲ್ಲಿರುವ ಸಂಸತ್ ಭವನದೊಳಗೆ ಉಗ್ರ ನುಗ್ಗಲು ಯತ್ನಿಸಿ ಪೊಲೀಸ್ ಅಧಿಕಾರಿಗೆ ಚಾಕು ಹಾಕಿ ಕೊಂದಿದ್ದಾನೆ. ಕೂಡಲೇ ಉಗ್ರನನ್ನ ಭದ್ರತಾ ಪಡೆಯವ್ರು ಶೂಟ್ ಮಾಡಿ ಕೊಂದುಹಾಕಿದ್ದಾರೆ.
Advertisement
Advertisement
ಉಗ್ರನ ದಾಳಿ ವೇಳೆ ಸಂಸತ್ ಭವನದಲ್ಲಿ ಬ್ರಿಟನ್ ಪ್ರಧಾನಿ ತೆರೆಸಾ ಮೇ ಕೂಡ ಇದ್ರು. ಈ ಘಟನೆಯನ್ನ ಭಯೋತ್ಪಾದಕ ದಾಳಿ ಅಂತ ಬ್ರಿಟನ್ ಘೋಷಿಸಿದೆ. ಲಂಡನ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಭಾರತೀಯರಿಗೆ ತೊಂದರೆ ಆಗಿಲ್ಲ ಅಂತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
Advertisement
I am in constant touch with Indian High Commission in London. There is no Indian casualty reported so far. #LondonAttack @HCI_London
— Sushma Swaraj (@SushmaSwaraj) March 22, 2017