ಲಂಡನ್: ಬ್ರಿಟನ್ ಉಪ ಪ್ರಧಾನಿ (UK Deputy Prime Minister) ಡೊಮಿನಿಕ್ ರಾಬ್ (Dominic Raab) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಹೋದ್ಯೋಗಿಗಳಿಗೆ ಬೆದರಿಕೆ ಹಾಕುತ್ತಿದ್ದರು ಎಂಬ ದೂರುಗಳ ಬಗ್ಗೆ ಸ್ವತಂತ್ರ ತನಿಖೆ ಕೈಗೊಂಡ ಬೆನ್ನಲ್ಲೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರಧಾನಿ ರಿಷಿ ಸುನಕ್‌ಗೆ (Rishi Sunak) ಬರೆದ ಪತ್ರವನ್ನು ರಾಬ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಂಬಂಧ ತಕ್ಷಣದ ಪ್ರತಿಕ್ರಿಯೆ ನೀಡಲು ಸುನಾಕ್ ಕಚೇರಿ ನಿರಾಕರಿಸಿದೆ. ಇದನ್ನೂ ಓದಿ: ಸ್ಪೇಸ್‌ಎಕ್ಸ್‌ನ ದೈತ್ಯ ರಾಕೆಟ್ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟ
ನಾನು ವಿಚಾರಣೆಗೆ ಕರೆ ನೀಡಿದ್ದೆ. ಬೆದರಿಕೆ ಹಾಕಿದ್ದು ಸಾಬೀತಾದಲ್ಲಿ ರಾಜೀನಾಮೆ ನೀಡುತ್ತೇನೆ ಎಂದಿದ್ದೆ. ಈಗ ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ರಾಬ್ ತಿಳಿಸಿದ್ದಾರೆ.
ರಿಷಿ ಸುನಾಕ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜೀನಾಮೆ ನೀಡಿದ ಮೂರನೇ ಹಿರಿಯ ಸಚಿವ ರಾಬ್ ಆಗಿದ್ದಾರೆ. ಇದನ್ನೂ ಓದಿ: ಸ್ವರ್ಗ ಪ್ರಾಪ್ತಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ – ಬ್ರಿಟನ್ ಶಾಲೆಗಳಲ್ಲಿ ಹಿಂದೂಗಳಿಗೆ ಕಿರುಕುಳ
ಬೆದರಿಕೆ ಆರೋಪದ ಮೇಲೆಯೇ ಹಿರಿಯ ಸಚಿವರಾಗಿದ್ದ ಗೇವಿನ್ ವಿಲಿಯಮ್ಸನ್ ಅವರು ನವೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು. ತೆರಿಗೆ ವ್ಯವಹಾರಗಳ ವಿಚಾರವಾಗಿ ನಿಯಮ ಉಲ್ಲಂಘಿಸಿದ್ದ ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ನಾಧಿಮ್ ಜಹಾವಿ ಅವರನ್ನು ಸುನಾಕ್ ವಜಾಗೊಳಿಸಿದ್ದರು.
ಬ್ರಿಟನ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪದಲ್ಲಿದೆ. ಇದೇ ಹೊತ್ತಿನಲ್ಲೇ ಸಚಿವರ ರಾಜೀನಾಮೆ ಕನ್ಸರ್ವೇಟಿವ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.