– ತೆರೆಕಂಡ ಕಡೆಗೆಲ್ಲ 100% ಆ್ಯಕ್ಯುಪೆನ್ಸ್ ಪಡೆದು ಮುನ್ನುಗ್ಗುತ್ತಿದೆ ಸಿನಿಮಾ
– ವಿದೇಶದಲ್ಲೂ ಯುಐ ಕಮಾಲ್
ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ `ಯುಐ’ (UI) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸ್ತಿದೆ. 2 ದಿನದಲ್ಲಿ 37 ಕೋಟಿ ಬಾಚಿದೆ.
Advertisement
ಮೊದಲ ದಿನ 18, 2ನೇ ದಿನ 19 ಕೋಟಿ ಗಳಿಸಿದೆ. ಎರಡನೇ ದಿನದಲ್ಲಿ ಥಿಯೇಟರ್ ಸಂಖ್ಯೆ ಹೆಚ್ಚಾಗಿದೆ. ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬಹುತೇಕ ಕಡೆ ಯುಐ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
Advertisement
#Audience are God#God is Great🙏#Running House Full Shows in #Birmingham & #Bristol in UK pic.twitter.com/cRc8IEwuzx
— Sreekanth KP (@kp_sreekanth) December 21, 2024
Advertisement
ಇಂದು ಕರ್ನಾಟಕದಲ್ಲಿ ಹತ್ತು ಕೋಟಿ, ಆಂಧ್ರ ಮತ್ತು ತೆಲಂಗಾಣದಲ್ಲಿ ನಾಲ್ಕು ಕೋಟಿ ರೂಪಾಯಿ ಹಾಗೂ ಉತ್ತರ ಭಾರತದಿಂದ 1.5 ಕೋಟಿ ರೂಪಾಯಿ ಗಳಿಸಿದೆ. ವಿದೇಶಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ. ನಾಳೆ ಭಾನುವಾರ ಯುಐ ಗಳಿಕೆ ಇನ್ನಷ್ಟು ಹೆಚ್ಚಲಿದೆ.
Advertisement
ಎರಡನೇ ದಿನ ವೀಕೆಂಡ್ ಹಿನ್ನೆಲೆ ಥಿಯೇಟರ್‌ಗಳಲ್ಲಿ ಓವರ್ ಕ್ರೌಡ್ ಕಾಣಿಸಿಕೊಂಡಿತು. ದಾವಣಗೆರೆಯಲ್ಲಿ ಎರಡು ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನವಾಗಿದೆ. ಬೆಂಗಳೂರಿನ ಸುಂಕದಕಟ್ಟೆ ಮೋಹನ್ ಥಿಯೇಟರ್‌ನಲ್ಲಿ ಹೌಸ್ ಫುಲ್ ಆಗಿತ್ತು.
ಬರ್ಮಿಂಗ್ಹ್ಯಾಮ್‌ನಲ್ಲೂ ಯುಐ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ.