Bengaluru CityDistrictsKarnatakaLatestMain Post

ನನ್ನ ಆಸ್ತಿ, ಅಶ್ವಥ್ ನಾರಾಯಣ ಆಸ್ತಿಯನ್ನು ತನಿಖೆಗೆ ಒಳಪಡಿಸಲಿ: ಉಗ್ರಪ್ಪ

ಬೆಂಗಳೂರು: ನನ್ನ ಆಸ್ತಿ, ಅಶ್ವಥನಾರಾಯಣ ಅವರ ಆಸ್ತಿಯನ್ನು ಎರಡೂ ತನಿಖೆಗೆ ಒಳಪಡಿಸಲಿ. ಇವರ ಹಾಗೆ ವಾಮಾ ಮಾರ್ಗದಿಂದ ಆಸ್ತಿ ಮಾಡಿ ದುರಹಂಕಾರ ತಲೆಗೆ ಏರಿಸಿಕೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಅಶ್ವಥ್ ನಾರಾಯಣ ಈ ರಾಜ್ಯದ ಮಂತ್ರಿ. ಒಂದು ಪಕ್ಷದ ವಕ್ತಾರರನ್ನು ಏಕವಚನದಲ್ಲಿ ಮಾತನಾಡಿದ್ದು ನೋಡಿದರೆ ಅವರ ಸಂಸ್ಕಾರ ತೋರಿಸುತ್ತದೆ. ದರ್ಶನ್ ಗೌಡ ಅವರು ಮಾಗಡಿಯವರು. ನೀವು ಅಲ್ಲಿ ಉಸ್ತುವಾರಿ ಸಚಿವರು. ಇದರಿಂದಾಗಿ ದರ್ಶನ್ ಗೌಡ ಅರೆಸ್ಟ್ ಆಗಿಲ್ಲ. ನಿಮ್ಮ ಸಹೋದರ ಸತೀಶ್ ಹಣ ಪಡೆದಿದ್ದಾರೆ ಅಂತ ಜನ ಮಾತನಾಡ್ತಾರೆ ಎಂದು ಟೀಕಿಸಿದರು.

ಡಿಕೆಶಿ ಭ್ರಷ್ಟಾಚಾರದ ಬಗ್ಗೆ ನಾನು ಎಲ್ಲಿಯೂ ಮಾತನಾಡಿಲ್ಲ. ಮಾತನಾಡಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾನು ಡಿಕೆಶಿ ಭ್ರಷ್ಟ ಅಂತ ಹೇಳಿದ ದಾಖಲೆ ಕೊಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ನೀವು ರಾಜಕೀಯ ನಿವೃತ್ತಿ ಪಡೆಯಿರಿ. ಈ ಹಂತದಲ್ಲಿ ದಾಖಲೆ ಪ್ರಶ್ನೆ ಉದ್ಬವವಾಗಲ್ಲ ಎಂದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದ ದಾಖಲೆ ಇದೆ ಅಂತಾರೆ. ಒಬ್ಬ ಸಚಿವರಾಗಿ ನೀವು ಅದನ್ನು ಸಾಬೀತುಪಡಿಸಿ. ದಾಖಲಾತಿ ಇದ್ದರೆ ದೂರು ದಾಖಲು ಮಾಡಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವಥ್ ನಾರಾಯಣ ಸಹೋದರನಿಗೆ ಲಿಂಕ್ : ಉಗ್ರಪ್ಪ ಆರೋಪ

Leave a Reply

Your email address will not be published.

Back to top button