ಬಿಗ್ ಬಾಸ್ (Bigg Boss Kannada 11) ಸಾಮ್ರಾಜ್ಯದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಮಹಾರಾಜ ಉಗ್ರಂ ಮಂಜು ಮತ್ತು ಯುವರಾಣಿ ಮೋಕ್ಷಿತಾ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಆಟವೇ ರದ್ದಾಗಿತ್ತು. ಇದೀಗ ಇವರಿಬ್ಬರ ಕಿತ್ತಾಟಕ್ಕೆ ಬಿಗ್ ಬಾಸ್ ಹೊಸ ಟ್ವಿಸ್ಟ್ ನೀಡಿದ್ದಾರೆ. ರಾಜ ಮತ್ತು ಯುವರಾಣಿ ಇಬ್ಬರನ್ನು ಬಂಧನದಲ್ಲಿ ಇರಿಸಿದ್ದಾರೆ. ಅದಷ್ಟೇ ಅಲ್ಲ, ಇಬ್ಬರಿಗೂ ಬಿಡುಗಡೆ ಭಾಗ್ಯ ಸಿಗಬೇಕಾದ್ರೆ, ಮನೆ ಮಂದಿ ಟಾಸ್ಕ್ ಗೆಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ವಾಹಿನಿ ಹಂಚಿಕೊಂಡ ಪ್ರೋಮೋ ಕುತೂಹಲ ಮೂಡಿಸಿದೆ.
ರಾಜಮನೆತನದ ಅಣ್ಣ-ತಂಗಿಯಾಗಿ ಮೆರದಾಡುತ್ತಿದ್ದ ಮಂಜಣ್ಣ (Ugramm Manju) ಹಾಗೂ ಮೋಕ್ಷಿತಾರನ್ನು (Mokshitha Pai) ಬಂಧಿಸಿ ಹಗ್ಗದಿಂದ ಕಟ್ಟಿ ಹಾಕಲಾಗಿದೆ. ಇದರಿಂದ ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಪ್ರಜೆಗಳು ಮಾಡಿದ್ದೇ ಆಟವಾಗಿದೆ. ಅಲ್ಲದೇ ಬಿಗ್ ಬಾಸ್ ರಾಜ, ಯುವರಾಣಿಯನ್ನು ಬಿಡಿಸಿಕೊಂಡು ಬರಲು ಅಲ್ಲಿನ ಪ್ರಜೆಗಳಿಗೆ ಟಾಸ್ಕ್ ನೀಡಿದ್ದಾರೆ.
View this post on Instagram
ಯುವರಾಣಿ ಮೋಕ್ಷಿತಾ ಹಾಗೂ ಮಹಾರಾಜ ಮಂಜು ಬೆಂಬಲಿತ ಪ್ರಜೆಗಳು ಟಾಸ್ಕ್ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಈ ವೇಳೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ, ನಿರ್ಧಾರಕ್ಕೆ ತ್ರಿವಿಕ್ರಮ್ ಹಾಗೂ ಭವ್ಯ ಗೌಡ ಕೆಂಡಕಾರಿದ್ದಾರೆ. ಆಟದ ವೇಳೆ, ತ್ರಿವಿಕ್ರಮ್‌ಗೆ ಫೌಲ್ ಕೊಟ್ಟಿದ್ದಕ್ಕೆ ಕಿತ್ತಾಟ ಶುರುವಾಗಿದೆ. ಬಂಧನಕ್ಕೆ ಒಳಗಾಗಿರುವ ಮಂಜು, ಮೋಕ್ಷಿತಾರನ್ನು ಪ್ರಜೆಗಳು ಹೇಗೆ ಬಿಡಿಸಿಕೊಂಡು ಬರುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.