ಬಿಗ್‍ಬಾಸ್ ಸೀಸನ್ (Bigg Boss) 11ರ ಸ್ಪರ್ಧಿ ಹಾಗೂ ನಟ ಉಗ್ರಂ ಮಂಜು (Ugramm Manju) ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಸಂಧ್ಯಾ ಎನ್ನುವವರ ಕೈ ಹಿಡಿಯುತ್ತಿರುವ ಮಂಜು ಇಂದು (ನ.9) ರಂದು ಸರಳವಾಗಿ ಹೂ ಮುಡಿಸುವ ಶಾಸ್ತ್ರದ ಜೊತೆಗೆ ನಿಶ್ಚಿತಾರ್ಥ ನೆರವೇರಿದೆ. ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಪೀಣ್ಯದಲ್ಲಿ ನಿಶ್ಚಿತಾರ್ಥ ನೆರವೇರಿದೆ.
ನಿಶ್ಚಿತಾರ್ಥದಲ್ಲಿ ಉಂಗುರ ಬದಲಾಯಿಸಿಕೊಂಡ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ನಟ ಉಗ್ರಂ ಮಂಜು ಹಂಚಿಕೊಂಡಿದ್ದಾರೆ. ಉಗ್ರಂ ಮಂಜು 2026ರ ಜನವರಿ ತಿಂಗಳಿನಲ್ಲಿ ಹಸೆ ಮಣೆ ಏರಲಿದ್ದಾರೆ ಎನ್ನಲಾಗ್ತಿದೆ. ಆಪ್ತ ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಧ್ರುವ ಸರ್ಜಾ ಅಭಿಮಾನಿಗಳಿಂದ ಮಹತ್ವದ ಕಾರ್ಯ
ಮಂಜು ಮದ್ವೆಯಾಗ್ತಿರುವ ಹುಡುಗಿ ಹೆಸರು ಸಂಧ್ಯಾ. ಇವರು ಖಾಸಗಿ ಆಸ್ಪತ್ರೆಯ ಅಡ್ಮಿನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಹಿತಿ ಪ್ರಕಾರ ಸಂಧ್ಯಾ ಮೂಲತಃ ತುಮಕೂರಿನವರಾಗಿದ್ದು, ಪೀಣ್ಯದಲ್ಲಿ ವಾಸವಾಗಿದ್ದಾರಂತೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜನವರಿಯಲ್ಲಿ ಮದುವೆಗೆ ಅಣಿಯಾಗಿದ್ದಾರೆ. ಇದನ್ನೂ ಓದಿ: ಕಲಾವಿದರಿಗೆ ಅವಮಾನ ಮಾಡಿದ್ಯಾರು – ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಕೆಂಡಾಮಂಡಲ

