‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 8ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಹನುಮಂತ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಸ್ಪರ್ಧಿಗಳು ಮತ್ತು ಜನರ ಮನೆಗೆದ್ದಿದ್ದಾರೆ. ಈ ವಾರಾಂತ್ಯ ಕಿಚ್ಚನ ಪಂಚಾಯಿತಿಯಲ್ಲಿ ರಜತ್ ಕಿಶನ್ ಮತ್ತು ಶೋಭಾ ಶೆಟ್ಟಿ ದೊಡ್ಮನೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ಖಡಕ್ ಎಂಟ್ರಿಯ ನಡುವೆ ನಾಮಿನೇಷನ್ ಪ್ರಕ್ರಿಯೆ ಜರುಗಿದೆ. ಈ ವೇಳೆ, ತ್ರಿವಿಕ್ರಮ್ ಮತ್ತು ಉಗ್ರಂ ಮಂಜು (Ugramm Manju) ನಡುವೆ ವಾಕ್ಸಮರ ನಡೆದಿದೆ. ತ್ರಿವಿಕ್ರಮ್ ಮೇಲೆ ಮಂಜು ಕೆಂಡಕಾರಿದ್ದಾರೆ.
ಇಂದಿನ ಸಂಚಿಕೆಯ ಬಿಗ್ ಬಾಸ್ ಪ್ರೋಮೋದಲ್ಲಿ 50ನೇ ವಾರಕ್ಕೆ ಕಾಲಿಟ್ಟ ಮನೆ ಮಂದಿಗೆ ನಾಮಿನೇಷನ್ ಬಿಸಿ ಮುಟ್ಟಿಸಲಾಗಿದೆ. ಮಡಿಕೆಯನ್ನು ಕೋಲಿನಿಂದ ಹೊಡೆದು ನಾಮಿನೇಟ್ ಮಾಡಬೇಕಿತ್ತು. ಅದರಂತೆ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ನಾಮಿನೇಷನ್‌ಗೆ ಹೆಸರನ್ನು ತೆಗೆದುಕೊಂಡು ಮಡಿಕೆಯನ್ನು ಹೊಡೆದು ಹಾಕಿದ್ದಾರೆ. ಇದನ್ನೂ ಓದಿ:‘ಎಮರ್ಜೆನ್ಸಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್- ಜ.17ಕ್ಕೆ ಕಂಗನಾ ಸಿನಿಮಾ ರಿಲೀಸ್
ಇದೇ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೋಕ್ಷಿತಾ (Mokshitha Pai) ಅವರು ಮಂಜುರನ್ನು ನಾಮಿನೇಟ್ ಮಾಡಿದ್ದಾರೆ. ಮಂಜಣ್ಣನ ಕೆಲವು ಮಾತುಗಳು ನನಗೆ ಕುಗ್ಗಿಸುತ್ತದೆ ಅಂತ ಹೇಳಿದ್ದಾರೆ. ಅದಕ್ಕೆ ಉಗ್ರಂ ಮಂಜು ಅವರು ಮೋಕ್ಷಿತಾಗೆ ತಿರುಗೇಟು ನೋಡಿದ್ದಾರೆ. ಇನ್ಮುಂದೆ ನನಗೆ ಅಣ್ಣ ಅಂತ ಕರೆಯಬೇಡ ಎಂದು ಹೇಳಿ ಮೋಕ್ಷಿತಾಗೆ ನಾಮಿನೇಟ್ ಮಾಡಿದ್ದಾರೆ. ಇದಲ್ಲದೇ, ತ್ರಿವಿಕ್ರಮ್ (Trivikram) ಹಾಗೂ ಉಗ್ರಂ ಮಂಜು ನಡುವೆಯೂ ವಾದ ವಿವಾದ ನಡೆದಿದೆ. ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಒಬ್ಬರಿಗೊಬ್ಬರು ನಾಮಿನೇಟ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಈ ಇಬ್ಬರು ಜೋರು ಧ್ವನಿಯಲ್ಲಿ ಮಾತಾಡಿದ್ದಾರೆ.
ಪರ್ಸನಲ್ ಆಗಿ ಟಾರ್ಗೆಟ್ ಮಾಡುತ್ತಾರೆ ಎಂದು ಹೇಳುತ್ತಾ ಮಂಜುರನ್ನು ತ್ರಿವಿಕ್ರಮ್ ನಾಮಿನೇಟ್ ಮಾಡಿದ್ದಾರೆ. ಎಲ್ಲರನ್ನೂ ತುಳಿದು ಮೇಲಕ್ಕೆ ಬರಬೇಕು ಅನ್ನೋ ಮನೋಭಾವ ನಿನಗಿದೆ ಎಂದು ತ್ರಿವಿಕ್ರಮ್‌ಗೆ ಮಂಜು ತಿರುಗೇಟು ನೀಡಿದ್ದಾರೆ. ಕೆಲಸ ಆಗೋ ತನಕ ಮಾತ್ರ ಇರುತ್ತಾರೆ. ಆಮೇಲೆ ಇರಲ್ಲ ಎಂದು ಮಂಜು ಗುಡುಗಿದ್ದಾರೆ. ಜೋರಾಗಿ ಮಾತನಾಡಲು ನಮಗೂ ಬರುತ್ತ ಎಂದು ತ್ರಿವಿಕ್ರಮ್ ಕೂಡ ಕೆಂಡಕಾರಿದ್ದಾರೆ. ಇಬ್ಬರ ವಾಗ್ವಾದಕ್ಕೆ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.
View this post on Instagram
ಇನ್ನೂ ಮನೆಗೆ ಇಬ್ಬರು ಖಡಕ್ ಆಗಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನವಾಗಿದೆ. ಹಾಗಾಗಿ ಇನ್ಮುಂದೆ ಆಟದಲ್ಲಿ ಏನೆಲ್ಲಾ ತಿರುವು ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.