ಕೀವ್: ವ್ಲಾದಿಮಿರ್ ಪುಟಿನ್ (Vladimir Putin) ಕನಸಿನ ಯುರೋಪಿನ ಉದ್ದದ ಸೇತುವೆಯನ್ನು ಧ್ವಂಸ ಮಾಡಲಾಗಿದ್ದು, ಕ್ರಿಮಿಯಾ- ರಷ್ಯಾ ಸಂಪರ್ಕ ಕಡಿತಗೊಂಡಿದೆ.
ತನ್ನ ಮೇಲೆ ದಾಳಿ ಮಾಡುತ್ತಿರುವ ರಷ್ಯಾಗೆ (Ruaaia) ಉಕ್ರೇನ್ (Ukraine) ತಿರುಗೇಟು ನೀಡುತ್ತಲೇ ಇದೆ. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ (Crimea Kerch Bridge) ಮೂಲಕ ಉಕ್ರೇನ್‌ನ ಖೇರ್ಸನ್, ಝರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿದೆ. ಸ್ಫೋಟದದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಇದನ್ನೂ ಓದಿ: ದೇವಾಲಯಕ್ಕೆ ನುಗ್ಗಿ ಕಾಳಿ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು
Advertisement
Crimean bridge this morning. pic.twitter.com/chmoUEIxt7
— Anton Gerashchenko (@Gerashchenko_en) October 8, 2022
Advertisement
ದಕ್ಷಿಣ ಉಕ್ರೇನ್ ಯುದ್ಧದಲ್ಲಿ ತೊಡಗಿಕೊಂಡಿರುವ ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನು ತಲುಪಿಸುವ ಪ್ರಮುಖ ಮಾರ್ಗ ಇದಾಗಿತ್ತು. ಈ ಸ್ಫೋಟದ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ಕ್ರಿಮಿಯಾದ ರಷ್ಯಾ ಬೆಂಬಲಿತ ಪ್ರಾದೇಶಿಕ ಸಂಸತ್‌ನ ಸ್ಪೀಕರ್ ಆರೋಪಿಸಿದ್ದಾರೆ. ಈ ಸೇತುವೆಯನ್ನು ಸ್ಫೋಟಿಸುವುದಾಗಿ ಉಕ್ರೇನ್‌ನ ಅಧಿಕಾರಿಗಳು ಈ ಹಿಂದೆ ಹಲವು ಬಾರಿ ಬೆದರಿಕೆಯೊಡ್ಡಿದ್ದರು.
Advertisement
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 70ನೇ ವರ್ಷಕ್ಕೆ ಕಾಲಿಟ್ಟ ಮರುದಿನವೇ ಈ ಸ್ಫೋಟ ನಡೆದಿದೆ. ಪುಟಿನ್ ಅವರನ್ನು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಉಕ್ರೇನ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಬರ್ತ್‌ಡೆ ಪಾರ್ಟಿ – ಭಾರತ ಮೂಲದ ಯುವಕ ಕೊಲೆ
Advertisement
Consequences of the explosion on the #Crimean bridge. pic.twitter.com/F9DL7LsWBR
— NEXTA (@nexta_tv) October 8, 2022
ಸೇತುವೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಂಧನ ಸಾಗಿಸುತ್ತಿದ್ದ ರೈಲೊಂದರ 7 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಸೇತುವೆಯು ರೈಲುಗಳ (Railway) ಹಾಗೂ ವಾಹನಗಳ ಸಂಚಾರಕ್ಕೆ ಮಾರ್ಗಗಳನ್ನು ಹೊಂದಿದೆ. ವಾಹನಗಳು ಸಂಚರಿಸುವ ಒಂದು ಮಾರ್ಗ ಕುಸಿದಿದೆ.
ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ (Kerch Bridge) ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.