ನವದೆಹಲಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗದ(ಯುಜಿಸಿ) ಟ್ವಿಟ್ಟರ್ ಖಾತೆಯನ್ನು ಶನಿವಾರ ತಡರಾತ್ರಿ ಹ್ಯಾಕ್ ಮಾಡಲಾಗಿದೆ. ಇದು ಕಳೆದ ಎರಡು ದಿನಗಳಲ್ಲಿ ಹ್ಯಾಕ್ ಆಗಿರುವ ಮೂರನೇ ಸರ್ಕಾರಿ ಸಂಸ್ಥೆಯ ಖಾತೆಯಾಗಿದೆ.
ಯುಜಿಸಿ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್ ಆದ ಬಳಿಕ ಈ ಖಾತೆಯನ್ನು ಬಳಸಿ ಎನ್ಎಫ್ಟಿಗೆ ಸಂಬಂಧಿಸಿದ ಹಲವಾರು ಟ್ವೀಟ್ಗಳನ್ನು ಮಾಡಲಾಗಿದೆ. ಯುಜಿಸಿಯ ಟ್ವಿಟ್ಟರ್ ಹ್ಯಾಂಡಲ್ನಲ್ಲಿ 2,96,000 ಕ್ಕೂ ಹೆಚ್ಚು ಅನುಯಾಯಿಗಳಿದ್ದು, ಅಧಿಕೃತ ವೆಬ್ಸೈಟ್ಗೆ ಲಿಂಕ್ ಮಾಡಲಾಗಿದೆ. ಇದನ್ನೂ ಓದಿ: 5 ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ- ಭಾರತಕ್ಕೆ 3ನೇ ಅಲೆಯ ಮುನ್ಸೂಚನೆ
Advertisement
Advertisement
2 ದಿನಗಳ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಟ್ಟಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಬಳಿಕ ಭಾರತೀಯ ಹವಾಮಾನ ಇಲಾಖೆಯ ಟ್ವಿಟ್ಟರ್ ಖಾತೆಯನ್ನೂ ಇದೇ ರೀತಿ ಹ್ಯಾಕ್ ಮಾಡಲಾಗಿತ್ತು. ಇದೀಗ ಕೇವಲ 48 ಗಂಟೆಗಳೊಳಗೆ ಹ್ಯಾಕ್ ಆಗಿರುವ 3 ನೇ ಸರ್ಕಾರಿ ಟ್ವಿಟ್ಟರ್ ಖಾತೆ ಯುಜಿಸಿಯದ್ದಾಗಿದೆ. ಇದನ್ನೂ ಓದಿ: ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್
Advertisement
Advertisement
ಸರ್ಕಾರಿ ಟ್ವಿಟ್ಟರ್ ಖಾತೆಗಳ ಹ್ಯಾಕ್ಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯುಪಿ ಸರ್ಕಾರ ತಿಳಿಸಿದೆ. ಪ್ರಕರಣದ ಬಗ್ಗೆ ಸೈಬರ್ ತಜ್ಞರು ತನಿಖೆ ನಡೆಸುತ್ತಿದ್ದಾರೆ.