ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಐಜಿಐ)ದಲ್ಲಿ ಉಗಾಂಡಾ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆ ತನ್ನ ಹೊಟ್ಟೆಯಲ್ಲಿ 1ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟು, ಕಳ್ಳಸಾಗಣೆ ಮಾಡುತ್ತಿದ್ದಳು.
ಉಗಾಂಡಾ ಮೂಲದ ಮಹಿಳೆ ಕೆಲವು ದಿನಗಳ ಹಿಂದೆ ಐಜಿಐ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಆಕೆಯ ಚಲನವಲನಗಳು ಅಸಾಮಾನ್ಯವಾಗಿದ್ದವು. ಆಕೆಯನ್ನು ಗುರುತಿಸಿದ ಕಸ್ಟಮ್ಸ್ ಅಧಿಕಾರಿಗಳು ಮಾತಾಡಿಸಿದಾಗ ಆಕೆ ವಿಚಿತ್ರವಾಗಿ ನಡೆದುಕೊಂಡಿದ್ದಳು. ಆಕೆಯನ್ನು ಪ್ರಶ್ನಿಸಿದಾಗ ಕೊಕೇನ್ ಮಾತ್ರೆಗಳನ್ನು ನುಂಗಿರುವ ವಿಚಾರವನ್ನು ತಿಳಿಸಿದ್ದಾಳೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ
Advertisement
Advertisement
ಮಹಿಳೆ ಹೊಟ್ಟೆಯಲ್ಲಿ ಕೊಕೇನ್ ಬಚ್ಚಿಟ್ಟಿದ್ದ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದು, 91 ಕೊಕೇನ್ ತುಂಬಿದ ಮಾತ್ರೆಗಳನ್ನು ಆಕೆಯ ದೇಹದಿಂದ ತೆಗೆಯಲಾಯಿತು. ಒಟ್ಟು 996 ಗ್ರಾಂ ಕೊಕೇನ್ ಅನ್ನು ಆಕೆಯ ದೇಹದಿಂದ ತೆಗೆಯಲು 4 ದಿನಗಳು ಬೇಕಾಯಿತು ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Advertisement
ಸಾಮಾನ್ಯವಾಗಿ ವ್ಯಕ್ತಿ ತನ್ನ ಹೊಟ್ಟೆಯಲ್ಲಿ 400 ರಿಂದ 500 ಗ್ರಾಂ ವರೆಗಿನ ಬಾಹ್ಯ ವಸ್ತುಗಳನ್ನು ಹೊಟ್ಟೆಯೊಳಗೆ ಬಚ್ಚಿಡಲು ಸಾಧ್ಯವಿರುತ್ತದೆ. ಆದರೆ ಈ ಮಹಿಳೆ 1 ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟಿರುವುದು ಅಪರೂಪ ಹಾಗೂ ಆಘಾತ ಮೂಡಿಸಿರುವ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಪ್ರೇರಣೆ – ಚಾಮರಾಜನಗರದಲ್ಲಿ ಇದುವರೆಗೆ 9,500 ಮಂದಿ ನೇತ್ರದಾನಕ್ಕೆ ನೋಂದಣಿ
Advertisement
ಈ ಕೊಕೇನ್ ಗುಳಿಗೆಯನ್ನು ಹೊಟ್ಟೆಯಲ್ಲಿ ಬಚ್ಚಿಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿದ್ದಾರೆ. ಒಂದುವೇಳೆ ಗುಳಿಗೆಗಳು ಹೊಟ್ಟೆಯ ಒಳಗೆ ಸಿಡಿದಿದ್ದರೆ ಮಹಿಳೆಯ ಜೀವಕ್ಕೆ ಅಪಾಯವಿತ್ತು ಎಂದು ತಿಳಿಸಿದರು.