ಬೆಂಗಳೂರು: ನಾಡಿನಾದ್ಯಂತ ಯುಗಾದಿ (Ugadi) ಸಂಭ್ರಮ ಮನೆ ಮಾಡಿದೆ. ಹೊಸವರ್ಷವನ್ನು ಬರಮಾಡಿಕೊಳ್ಳಲು ಕಾತುರದಲ್ಲಿದ್ದ ಸಿಟಿಜನ ಹೂವು (Flowers), ಹಣ್ಣು (Fruits) ಖರೀದಿಗೆ ಮುಗಿಬಿದ್ದಿದ್ದಾರೆ. ಹಬ್ಬದ ಜೋಶ್‍ನಲ್ಲಿ ಮಾರುಕಟ್ಟೆಗೆ ಹೋದ ಜನರಿಗೆ ಬೆಲೆ ಏರಿಕೆ ಶಾಕ್ ತಟ್ಟುತ್ತಿದೆ.
ಯುಗಾದಿ ಹಬ್ಬದೊಂದಿಗೆ ಆರಂಭವಾಗುವ ಹೊಸವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಯುಗಾದಿ ಹಬ್ಬಕ್ಕೆ ಭರದ ಸಿದ್ಧತೆ ನಡೆಸಿದ್ದರು. ಹೊಸ ದಿರಿಸು ಖರೀದಿ ಜೊತೆಗೆ ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಇತ್ಯಾದಿಗಳ ಖರೀದಿಯು ನಗರದ ಮಾರುಕಟ್ಟೆಗಳಲ್ಲಿ ಅಬ್ಬರದಿಂದ ನಡೆದಿದೆ. ನಗರದ ಕೆ.ಆರ್. ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಗಾಂಧಿ ಬಜಾರ್, ಸೇರಿದಂತೆ ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಖರೀದಿ ಜೋರಾಗಿ ನಡೆದಿದೆ. ಹಬ್ಬದ ಜೋಶ್‍ನಲ್ಲಿದ್ದ ಜನಕ್ಕೆ ಬೆಲೆ ಏರಿಕೆಯ ಶಾಕ್ ತಟ್ಟಿದೆ.
Advertisement
Advertisement
ಯುಗಾದಿ ಹಬ್ಬಕ್ಕೆ ಹೂವು, ಹಣ್ಣು, ಮಾವಿನಸೊಪ್ಪು, ಬೇವಿನಸೊಪ್ಪು ಬೇಕೇ ಬೇಕಾಗುತ್ತದೆ. ಹಾಗಾದರೆ ಯಾವುದೆಲ್ಲ ಎಷ್ಟು ದರ ಹೆಚ್ಚಾಗಿದೆ ಎನ್ನುವುದು ಈ ರೀತಿಯಿದೆ.
Advertisement
ಬೇವಿನಸೊಪ್ಪು 1 ಕಟ್ಟಿಗೆ 20 ರೂ.ಯಿದ್ದು, ಮಾವಿನಸೊಪ್ಪು 1 ಕಟ್ಟಿಗೆ 30 ರೂ., ಚಂಡೆ ಹೂವು 1 ಮಾರಿಗೆ 80 ರೂ. ಇದೆ. ಇನ್ನೂಳಿದಂತೆ ಹೂವಿನಲ್ಲಿ ಸೇವಂತಿಗೆ 1 ಮಾರಿಗೆ 120 ರೂ., ಗುಲಾಬಿ ಒಂದು ಕೆಜಿಗೆ 300 ರೂ., ಸೇವಂತಿಗೆ ಒಂದು ಕೆಜಿಗೆ 250 -300 ರೂ., ಮಲ್ಲಿಗೆ 1 ಕೆಜಿಗೆ 700 ರೂ., ಕನಕಾಂಬರ 1 ಕೆಜಿಗೆ 800 ರೂ., ಸುಗಂಧರಾಜ 1 ಕೆಜಿಗೆ 160 ರೂ., ಚೆಂಡು ಹೂ 1ಕೆಜಿಗೆ 80 ರೂ., ತುಳಸಿ ಹಾರಗೆ 1 ಕೆಜಿ 70 ರೂ. ದರವಿದೆ. ಹಣ್ಣುಗಳಾದ ದಾಳಿಂಬೆಗೆ 1 ಕೆಜಿಗೆ 120 ರೂ., ಆಪಲ್ 1 ಕೆಜಿಗೆ 180 ರೂ., ಮೊಸಂಬಿ 1 ಕೆಜಿಗೆ 120 ರೂ., ಕಿತ್ತಳೆ 1 ಕೆಜಿಗೆ 150 ರೂ., ಮರಸೇಬು 1 ಕೆಜಿಗೆ 250 ರೂ., ಬಟರ್ ಫ್ರೂಟ್ 1 ಕೆಜಿಗೆ 350 ರೂ.ನಷ್ಟು ದರ ಏರಿಕೆ ಆಗಿದೆ. ಇದನ್ನೂ ಓದಿ: ವರುಣಾದಲ್ಲಿ ಸ್ಪರ್ಧಿಸಿದ್ರೂ ಸಿದ್ದರಾಮಯ್ಯ ವಿರುದ್ಧ ಪದ್ಮವ್ಯೂಹ- ಬೆಂಗ್ಳೂರಲ್ಲಿ ಕೋಲಾರ ಕೈಪಡೆ ಹೈಡ್ರಾಮಾ
Advertisement
ಯುಗಾದಿ ಹಬ್ಬದ ಪ್ರಯುಕ್ತ ಸಾಮಾಗ್ರಿಗಳ ಬೆಲೆ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಭಾರೀ ಹೊಡೆತ ಬಿದ್ದಿದೆ. ಆದರೂ ಹಬ್ಬವನ್ನು ಆಚರಣೆ ಮಾಡ್ಲೇಬೇಕಲ್ವಾ ಅಂತಾ ಅಗತ್ಯ ವಸ್ತುಗಳನ್ನು ಜನರು ತೆಗೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ಬರುತ್ತಿಲ್ಲ. ಖರೀದಿ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ವ್ಯಾಪಾರ ಡಲ್ ಅಂತಾ ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಪ್ರಬಲ ಭೂಕಂಪನ – ಬೆಚ್ಚಿ ಮನೆಯಿಂದಾಚೆ ಓಡಿಬಂದ ಜನ