– ಗುಡ್ಡೆ ಮಾಂಸ ಮಾರಾಟ ನಿಷೇಧ
ಬೆಂಗಳೂರು: ಒಂದೆಡೆ ಕೊರೊನಾ ವೈರಸ್‍ನಿಂದ ಜನ ಕಂಗಾಲಾಗಿದ್ದು, ಇನ್ನೊಂದೆಡೆ ಹಕ್ಕಿ ಜ್ವರ ಸಹ ದೃಢಪಟ್ಟಿದೆ. ಹೀಗಾಗಿ ಭಯದ ವಾತಾವರಣದಲ್ಲೇ ಜನ ಬದುಕುತ್ತಿದ್ದು, ಚಿಕನ್, ಮಟನ್ ತಿನ್ನಲು ಮೀನಾಮೇಷ ಎಣಿಸುತ್ತಿದ್ದಾರೆ. ಇದರ ಮಧ್ಯೆ ಯುಗಾದಿ ಹಬ್ಬದ ಹೊಸತೊಡಕಿಗೆ ಬಿಬಿಎಂಪಿ ಹೊಸ ನಿಯಮ ತರಲು ಚಿಂತಿಸಿದ್ದು, ಈ ಮೂಲಕ ನಾನ್ ವೆಜ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಲು ಮುಂದಾಗಿದೆ.
Advertisement
ಬಿಬಿಎಂಪಿಯ ಈ ನಿಯಮಗಳ ಪ್ರಕಾರ ಎಲ್ಲಂದರಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ. ಇದರಿಂದಾಗಿ ಗುಡ್ಡೆ ಮಾಂಸಕ್ಕೆ ಕತ್ತರಿ ಬೀಳಲಿದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೆ ಎಲ್ಲ ಮಾಂಸದಂಗಡಿಗಳಲ್ಲಿ ಚಿಕನ್ ಸಿಗುವುದಿಲ್ಲ. ಕೇವಲ ನಿಗದಿತ ಮಾಂಸದ ಅಂಗಡಿಗಳಲ್ಲಿ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಯುತ್ತಿದೆ. ಸಾರ್ವಜನಿಕವಾಗಿ ಎಲ್ಲೆಂದರಲ್ಲಿ, ರಸ್ತೆ ಬದಿಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ. ಮಾಂಸ ಮಾರಾಟದ ವೇಳೆ ಸ್ವಚ್ಚತೆ ಕಾಪಾಡಬೇಕು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.
Advertisement
Advertisement
ಈ ಬೆಳವಣಿಗೆ ನಾನ್ ವೆಜ್ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ನಾನ್ ವೆಜ್ ವಿಚಾರವಾಗಿಯೂ ಬಿಬಿಎಂಪಿ ಹೀಗೇ ಮಾಡಿ, ಹೀಗೆ ಮಾಡಬೇಡಿ ಎಂದು ಸೂಚಿಸುವುದು ಸರಿಯಲ್ಲ. ಗುಡ್ಡೆ ಮಾಂಸ ಮಾರಾಟ ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.