ಉಡುಪಿ: ಇಂದು ಸೌರಮಾನ ಯುಗಾದಿ. ಉಡುಪಿ ಜಿಲ್ಲೆಯಲ್ಲಿ ವೈದಿಕ ಮತ್ತು ಜನಪದ ಸಂಪ್ರದಾಯದಂತೆ ಈ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯ್ತು. ಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಪಂಚಾಂಗ ಶ್ರವಣ, ಮಹೋತ್ಸವ ಜರುಗಿತು.
ಹೌದು. ಉಡುಪಿಯಲ್ಲಿ ಸೌರಮಾನ ಪದ್ಧತಿಯಂತೆ ಯುಗಾದಿ ಆಚರಿಸಲಾಯ್ತು. ಕೃಷ್ಣ ದೇವರ ಮಠದಲ್ಲಿ ಜ್ಯೋತಿಷ್ಯರ ಮೂಲಕ ವರ್ಷದ ಗ್ರಹಗತಿಗಳನ್ನು ತಿಳಿಯಲು ಭಕ್ತಗಣ ಉತ್ಸುಕತೆಯಿಂದ ಭಾಗವಹಿಸಿದ್ದರು.
Advertisement
ಕೃಷ್ಣ ದೇವರ ಸಮ್ಮುಖದಲ್ಲಿರುವ ಚಂದ್ರಶಾಲೆಯಲ್ಲಿ ವಿದ್ವಾಂಸರ ಮೂಲಕ ಪಂಚಾಂಗ ಶ್ರವಣ ನಡೆಯಿತು. ಅಷ್ಟಮಠಾಧೀಶರು ಭಕ್ತರ ಜೊತೆ ಕುಳಿತು ವರ್ಷದ ಗ್ರಹಗತಿಗಳನ್ನು ಕೇಳಿದರು. ಉಡುಪಿ ಪಂಚಾಂಗಕ್ಕೆ ದೇಶದಲ್ಲೇ ವಿಶೇಷ ಮಾನ್ಯತೆಯಿದೆ. ಕೃಷ್ಣಮಠದ ಆಸ್ಥಾನದ ವಿದ್ವಾಂಸರ ಮೂಲಕ ನಡೆಯುವ ಈ ಪಂಚಾಂಗ ಪಠಣಕ್ಕೆ ಶತಮಾನಗಳ ಇತಿಹಾಸ ಇದೆ. ಈ ಬಾರಿ ಪೇಜಾವರ, ಪಲಿಮಾರು, ಅದಮಾರು, ಕೃಷ್ಣಾಪುರ, ಕಾಣಿಯೂರು, ಸೋದೆ ಮಠಾಧೀಶರು ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಭಾಗಿಯಾದರು.
Advertisement
Advertisement
ಪಂಚಾಂಗ ಪಠಣದ ಬಳಿಕ ರಥಬೀದಿಯಲ್ಲಿ ಕೃಷ್ಣ ದೇವರ ವೈಭವದ ಉತ್ಸವ ನಡೆದು, ಸಾವಿರಾರು ಜನ ಯುಗಾದಿ ಉತ್ಸವದಲ್ಲಿ ಭಾಗಿಯಾದರು.
Advertisement
ಧಾರ್ಮಿಕ ವಿದ್ವಾಂಸ ವಾಸುದೇವ ಭಟ್ ಮಾತನಾಡಿ, ಆಸ್ಥಾನದ ವಿದ್ವಾಂಸರು ಪಂಚಾಂಗದ ಫಲವನ್ನು ಹೇಳುವ ಸಂಪ್ರದಾಯ ಕೃಷ್ಣಮಠದಲ್ಲಿದೆ. ದೋಷಗಳಿದ್ದರೆ ಅಶುಭಗಳನ್ನು ಕ್ಷಯ ಮಾಡಲಾಗುತ್ತಾರೆ. ಕಡಿಯಾಳಿ ಮಹಿಷಮರ್ಧಿಸಿ ದೇವಸ್ಥಾನಕ್ಕೆ ಪ್ರಸಾದ ತೆಗೆದುಕೊಂಡು ಹೋಗುವ ಸಂಪ್ರದಾಯ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.