ಬೆಂಗಳೂರು: ಇಂದು ದುರ್ಮುಖಿ ನಾಮ ಸಂವತ್ಸರದ ಹೇವಿಳಂಬಿ ಯುಗಾದಿ ಹಬ್ಬ. ಭೀಕರ ಬರ ಹಾಗೂ ದರ ಏರಿಕೆ ಮಧ್ಯೆಯೂ ರಾಜ್ಯದಲ್ಲಿ ಸಂಭ್ರಮದ ಯುಗಾದಿ ಮನೆ ಮಾಡಿದೆ.
Advertisement
ಬರದ ಮಧ್ಯೆಯೂ ವರ್ಷದ ಹಬ್ಬ ಮಾಡ್ಬೇಕಲ್ಲ ಅಂತ ಜನ ಬೇವು-ಬೆಲ್ಲ, ಹಣ್ಣು-ಹಂಪಲು ಹಾಗೂ ಹೂವುಗಳನ್ನು ಖರೀದಿ ಮಾಡ್ತಿದ್ದಾರೆ. ಬೆಂಗಳೂರಿನ ವಿವಿಧ ಮಾರ್ಕೆಟ್‍ಗಳಲ್ಲಿ ಖರೀದಿಗಾಗಿ ಜನ ಜಮಾಯಿಸಿದ್ದಾರೆ.
Advertisement
Advertisement
ದಕ್ಷಿಣ ಭಾರತದಲ್ಲಿ ಯುಗಾದಿಯನ್ನು ಹಿಂದೂಗಳ ಹೊಸವರ್ಷವೆಂದು ಆಚರಣೆ ಮಾಡಲಾಗುತ್ತದೆ. ದೇಶದ ಇತರ ಭಾಗಗಳಲ್ಲಿ ಯುಗಾದಿಯನ್ನು ವಿವಿಧ ಹೆಸರಿನಿಂದ ಆಚರಿಸಲಾಗುತ್ತದೆ. ಆದರೆ ಎಲ್ಲಾ ರಾಜ್ಯಗಳ ಆಚರಣೆಯ ಮಹತ್ವ ಮಾತ್ರ ಹೊಸ ವರ್ಷವನ್ನು ಸ್ವಾಗತಿಸುವುದೇ ಆಗಿರುತ್ತದೆ. ಉತ್ತರ ಭಾರತದಲ್ಲಿ ಕೂಡ ಚೈತ್ರ ನವರಾತ್ರಿ ಹಬ್ಬದ ಸಡಗರ ಇದೆ.
Advertisement
ಯುಗಾದಿ ಎನ್ನುವುದು ಎರಡು ಸಂಸ್ಕೃತ ಪದಗಳಿಂದ ಬಂದಿದೆ. `ಯುಗ’ ಎಂದರೆ ವರ್ಷ `ಆದಿ’ ಎಂದರೆ ಆರಂಭವೆಂದು ಅರ್ಥ. ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿಯೆಂದು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಬ್ರಹ್ಮ ದೇವನು ಯುಗಾದಿಯಂದು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಮತ್ತು ಅದನ್ನು ಸುಂದರವಾಗಿಸಲು ಹಲವಾರು ತಿದ್ದುಪಡಿಗಳನ್ನು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಮೋದಿ, ಆದಿತ್ಯನಾಥ್ ವೃತ: ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಒಂಭತ್ತು ದಿನ ಅನ್ನ ಆಹಾರ ಸೇವನೆ ಮಾಡದೆ ವ್ರತ ಆಚರಿಸಲಿದ್ದಾರೆ. ಅಂತೆಯೇ ಗೋರಖ್‍ಪುರದ ಅರ್ಚಕರೂ ಆಗಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಸಹ ವ್ರತ ಆಚರಿಸಲಿದ್ದಾರೆ.