ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಕ್ಕೆ ಬಾಕಿ ಇರುವ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಿ.29 ಮತ್ತು 31ರಂದು ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಮೂಲಕ ಸೀಟು ಹಂಚಿಕೆ ಮಾಡಲು ತೀರ್ಮಾನಿಸಿದೆ.
ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಎರಡನೇ ಸ್ಟ್ರೇ ವೇಕೆನ್ಸಿ ಸುತ್ತಿನ ನಂತರ ಉಳಿದಿರುವ 7 ಹಾಗೂ ರದ್ದುಪಡಿಸಿಕೊಂಡಿರುವ ಒಂದು, ಒಟ್ಟು 8 ಸೀಟುಗಳಿಗೆ ಡಿ.29ರಂದು ಸೀಟು ಹಂಚಿಕೆ ನಡೆಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗಂಟೆಗೆ 700 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲು ಅಭಿವೃದ್ಧಿಪಡಿಸಿದ ಚೀನಾ – ಜಸ್ಟ್ 2 ಸೆಕೆಂಡ್‌ನಲ್ಲಿ ಕಣ್ಣ ಮುಂದೆಯೇ ಪಾಸ್ ಆಗುತ್ತೆ
ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ 5 ಹಾಗೂ ಕಲಬುರಗಿಯ ಎಂ.ಆರ್ ಎಂಸಿ ವೈದ್ಯಕೀಯ ಕಾಲೇಜಿನಲ್ಲಿ 2 ಸೀಟು ಉಳಿದಿವೆ. ಇದರ ಜತೆಗೆ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಒಬ್ಬ ಅಭ್ಯರ್ಥಿ ಅನಾರೋಗ್ಯದ ಕಾರಣಕ್ಕೆ ಪ್ರವೇಶ ರದ್ದುಪಡಿಸಿಕೊಂಡಿದ್ದು, ಆ ಸೀಟ ಅನ್ನೂ ಈ ಸುತ್ತಿನಲ್ಲಿ ಹಂಚಿಕೆಗೆ ಪರಿಗಣಿಸಲಾಗಿದೆ.
ಮೂರೂ ಕಾಲೇಜುಗಳಲ್ಲಿ ಅದರ್ಸ್ ಕೋಟಾ ದಲ್ಲಿ ಸೀಟುಗಳು ಲಭ್ಯ ಇದ್ದು, ಆಸಕ್ತರು ನಿಗದಿತ ಶುಲ್ಕದ ಡಿ.ಡಿ (ಎಂವಿಜೆ ಕಾಲೇಜಿಗೆ ₹40,11,950, ಎಂಆರ್ ಎಂಸಿ ಕಾಲೇಜಿಗೆ ₹39,11,950, ಧಾರವಾಡದ ಎಸ್ ಡಿ ಎಂ ವೈದ್ಯಕೀಯ ಕಾಲೇಜಿಗೆ ₹35,15,000) ಹಾಗೂ ಮೂಲ ದಾಖಲೆಗಳ ಸಮೇತ ಡಿ.29ರಂದು ಮಧ್ಯಾಹ್ನ 12 ಗಂಟೆಯೊಳಗೆ #KEA ಕಚೇರಿಯಲ್ಲಿ ಹಾಜರಾಗಬೇಕು. ಬಳಿಕ ಮಧ್ಯಾಹ್ನ 1ಗಂಟೆವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಬಳಿಕ ಡಿ.30ರೊಳಗೆ ಕಾಲೇಜಿಗೆ ಪ್ರವೇಶ ನೀಡಲಾಗುತ್ತದೆ.
ದಂತ ವೈದ್ಯಕೀಯದಲ್ಲಿ 5 ಸೀಟು ಲಭ್ಯ
ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ನಂತರ ಉಳಿದಿರುವ ಒಟ್ಟು 5 ಸೀಟುಗಳ ಹಂಚಿಕೆಗೆ ಡಿ.31ರಂದು ವಿಶೇಷ ಸುತ್ತಿನ ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂದು ಪ್ರಸನ್ನ ತಿಳಿಸಿದರು. ಇದನ್ನೂ ಓದಿ: `ಮಹಿಳೆ ತುಂಬಾ ಶಕ್ತಿಶಾಲಿ’ – ದರ್ಶನ್ ಪತ್ನಿ ಟಾಂಗ್ ಕೊಟ್ಟಿದ್ದು ಯಾರಿಗೆ?
ಇದುವರೆಗೂ ದಂತ ವೈದ್ಯಕೀಯ ಸೀಟು ಹಂಚಿಕೆಯಾಗದಿರುವ ಅರ್ಹ ಅಭ್ಯರ್ಥಿಗಳು ಅಂದು ಬೆಳಿಗ್ಗೆ 11.30ರೊಳಗೆ ನಿಗದಿತ ಶುಲ್ಕದಷ್ಟು ಡಿ.ಡಿ ಮತ್ತು ಮೂಲ ದಾಖಲೆಗಳನ್ನು #KEA ಕಚೇರಿಯಲ್ಲಿ ಸಲ್ಲಿಸಿದಲ್ಲಿ ಆಪ್ಷನ್ಸ್ ದಾಖಲಿಸಲು ಮಧ್ಯಾಹ್ನ 12ರಿಂದ 1ಗಂಟೆವರೆಗೆ ಅವಕಾಶ ನೀಡಲಾಗುವುದು. ಮಧ್ಯಾಹ್ನ 2ಗಂಟೆಗೆ ಫಲಿತಾಂಶ ನೀಡಲಾಗುವುದು. ಸೀಟು ಹಂಚಿಕೆಯಾದವರು ಜನವರಿ 1ರೊಳಗೆ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಯಾವ ಕಾಲೇಜಿನಲ್ಲಿ ಯಾವ ವರ್ಗದ ಸೀಟು ಖಾಲಿ ಇದೆ ಹಾಗೂ ಅದರ ಶುಲ್ಕದ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಶಾಮನೂರು ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಉಪಚುನಾವಣೆಗೆ ಸಿದ್ಧತೆ


