ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಡಿ.15ರಂದು ಬೆಳಿಗ್ಗೆ 11 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.
ಆನ್ ಲೈನ್ ಮೂಲಕ ವೈದ್ಯಕೀಯ ಕೋರ್ಸ್ ಶುಲ್ಕ ಪಾವತಿಸುವುದಕ್ಕೂ ಬ್ಯಾಂಕ್ ಅಕೌಂಟ್ ನಂಬರ್ (ವೆಬ್ ಸೈಟ್ ನೋಡಿ) ನೀಡಿದ್ದು, ಅದರ ನಂತರ ಪಾವತಿ ವಿವರ ಹಾಗೂ ಸಿಇಟಿ ಸಂಖ್ಯೆಯನ್ನು keavikasana@gmail.comಗೆ ಇ-ಮೇಲ್ ಮಾಡುವುದು ಅಥವಾ ಪ್ರಾಧಿಕಾರದ ಕಚೇರಿಗೆ ಖುದ್ದು ತಲುಪಿಸಬೇಕು. ಅದರ ಬಳಿಕವೇ ಆಪ್ಷನ್ ದಾಖಲಿಗೆ ಅವಕಾಶ ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಮುಂದಿನ ಎರಡು ದಿನ ಉತ್ತರ ಕರ್ನಾಟಕದಲ್ಲಿ ಭಾರೀ ಶೀತಗಾಳಿ – ಮಾನವ, ಬೆಳೆಗಳ ಮೇಲೆ ತೀವ್ರ ಪರಿಣಾಮ
ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಡಿ.15ರಂದು ಸಂಜೆ 4ಗಂಟೆ ನಂತರ ಪ್ರಕಟಿಸಲಾಗುತ್ತದೆ. ಇದನ್ನೂ ಓದಿ: ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ – ಬೆಂಗ್ಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ದೂರು
3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡಿರುವ ಕೆಲವರು ಇನ್ನೂ ಕಾಲೇಜಿಗೆ ವರದಿ ಮಾಡಿಕೊಂಡಿಲ್ಲ. ಅಂತಹವರ ಪಟ್ಟಿಯನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರವೇಶ ಪಡೆಯುವುದು ಕಡ್ಡಾಯವಾಗಿದ್ದು, ಅಂತಹವರಿಗೆ ಡಿ.14ರವರೆಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ವರದಿ ಮಾಡಿಕೊಳ್ಳದಿದ್ದರೆ ಡಿ.15ರಂದು ಬೆಳಿಗ್ಗೆ 9ಗಂಟೆಗೆ ಪ್ರಾಧಿಕಾರಕ್ಕೆ ಖುದ್ದು ಬಂದು ಕಾರಣ ತಿಳಿಸಬೇಕು. ನಂತರ ಅವರಿಂದ ತೆರವಾಗುವ ಸೀಟುಗಳನ್ನು ಸ್ಟ್ರೇ ವೇಕೆನ್ಸಿ ಸುತ್ತಿಗೆ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Explainer | ಕಾಳಿಂಗ ಸರ್ಪ ಹಿಡಿಯೋಕೆ ಅರಣ್ಯ ಇಲಾಖೆಯಿಂದಲೇ ವ್ಯವಸ್ಥೆ - ವಿಶೇಷ ತರಬೇತಿ ಅಗತ್ಯವೇ? ಉರಗ ತಜ್ಞರು ಹೇಳೋದೇನು?

