ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲು ಅಮೆರಿಕಕ್ಕೆ ಹೋಗಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಅಮೆರಿಕದಲ್ಲಿ ನೆಲೆಸಿರುವ ವಿಜ್ಞಾನಿಯೊಬ್ಬರು ಇಂಡಿಯಾಕ್ಕೆ ಬಂದಿದ್ದಾರೆ. ಭಾರತಕ್ಕೆ ಬಂದು ಯುವ ವಿಜ್ಞಾನಿಗಳನ್ನು ತಯಾರು ಮಾಡುವ ಇವರು, ಭಾರತದ ಶಿಕ್ಷಣ ವ್ಯವಸ್ಥೆಯನ್ನು ಬದಲು ಮಾಡೋದಕ್ಕೆ ಮೋದಿ ಅವರಿಗೆ ಸಲಹೆ ನೀಡಲಿದ್ದಾರೆ.
2020ರ ಹೊತ್ತಿಗೆ ಭಾರತ ಸೂಪರ್ ಪವರ್ ಆಗುತ್ತೆ ಅನ್ನೋ ಮಾತು ಬಹಳ ಚರ್ಚೆಯಲ್ಲಿದೆ. ಉಡುಪಿ ಮೂಲದ ವಿಜ್ಞಾನಿ ಪೂರ್ಣಿಮಾ ಕಾಮತ್ ಅವರು ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಆದರೆ ಈಗ ಭಾರತಕ್ಕೆ ಮರಳಿರುವ ಅವರು ಭಾರತ ಸೂಪರ್ ಪವರ್ ಆಗೋವಷ್ಟು ಸದೃಢವಾಗಿಲ್ಲ ಎಂದಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದ ಶಿಕ್ಷಣ ವ್ಯವಸ್ಥೆ 40 ವರ್ಷ ಹಿಂದಿದೆ. ಹೀಗಾಗಿ ಪ್ರಧಾನಿ ಮೋದಿಗೆ 2020ರ ಪಠ್ಯಕ್ರಮ ಹೇಗಿರಬೇಕೆಂದು ಎಂದು ಸಲಹೆ ನೀಡಲಿದ್ದಾರೆ. ಇದಕ್ಕೆ ಈಗಾಗಲೇ ಕೆಲಸ ಶುರುಮಾಡಿರುವ ವಿಜ್ಞಾನಿ ಪಠ್ಯ, ಪರೀಕ್ಷೆ ಹೀಗೆ ಶೈಕ್ಷಣಿಕ ವರ್ಷದ ಸಿಲೆಬಸ್ ಸಂಪೂರ್ಣ ಬದಲು ಮಾಡಬೇಕೆಂಬ ಆಲೋಚನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಮೂವತ್ತು ವರ್ಷದ ಹಿಂದೆ ಪೂರ್ಣಿಮಾ ಅಮೆರಿಕ ಸೇರಿಕೊಂಡಿದ್ದರು. ಅಲ್ಲಿ ಪೂರ್ಣಿಮಾ ಅವರು ಕ್ಯಾನ್ಸರ್ ಚಿಕಿತ್ಸೆ ಕುರಿತಾದ ಸಂಶೋಧನೆ ಮಾಡುತ್ತಿದ್ದಾರೆ. ಇವರ ಪತಿ ಕೂಡ ವಿಜ್ಞಾನಿ. ಕಳೆದ 15 ವರ್ಷದಿಂದ ಪ್ರತಿ ವರ್ಷ ಪೂರ್ಣಿಮಾ ಅವರು ಭಾರತಕ್ಕೆ ಬರುತ್ತಾರೆ. ಹಾಗೆಯೇ ಬ್ರೈನ್ ಕ್ವೆಸ್ಟ್ ಅನ್ನೋ ಮಾಡೆಲ್ ಮೇಕಿಂಗ್ ಕಾಂಪಿಟೇಶನ್ ಆಯೋಜಿಸುತ್ತಾರೆ. ಬಾಲ ವಿಜ್ಞಾನಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಗ್ಲೋಬಲ್ ವಾರ್ಮಿಂಗ್ ಜಾಸ್ತಿಯಾಗಿದ್ದು, ಈ ಬಾರಿ ಪರಿಸರ ಕಾಳಜಿಯ ಕಾನ್ಸೆಪ್ಟ್ ನಲ್ಲಿ ಮಕ್ಕಳು ಮಾಡೆಲ್‍ಗಳನ್ನು ತಯಾರು ಮಾಡಿದ್ದು, ಈ ಮಾಡೆಲ್ ಎಲ್ಲರ ಗಮನ ಸೆಳೆದಿದೆ. ಜೊತೆಗೆ ಸಿಬಿಎಸ್‍ಸಿ ಪಠ್ಯಕ್ರಮಕ್ಕೂ ಪೂರ್ಣಿಮಾ ಅವರು ಸಾಕಷ್ಟು ಸಲಹೆ ನೀಡಿದ್ದರು. ಗೂಗಲ್, ಯೂಟ್ಯೂಬ್‍ನಲ್ಲಿ ಮಕ್ಕಳ ಶಿಕ್ಷಣಕ್ಕೆ ಬೇಕಾದ ಎಲ್ಲಾ ಮಾಹಿತಿ ಇದೆ, ಮಕ್ಕಳ ತಲೆಯಲ್ಲಿ ಹೊಸದೇನು ಆವಿಷ್ಕಾರಗಳು ಹೊಳೆಯುತ್ತೆ ಅನ್ನೋದನ್ನು ಒರೆಗೆಹಚ್ಚಬೇಕು ಎಂದು ಪೂರ್ಣಿಮಾ ಕಾಮತ್ ಸಲಹೆ ಕೊಟ್ಟರು.