– ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು
ಉಡುಪಿ: ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಭಕ್ತರ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ ಎಂದು ಉಡುಪಿಯ (Udupi) ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Teertha Swamiji) ಹೇಳಿದರು.
ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿವೆ. ಜೀರ್ಣೋದ್ಧಾರ ಇಲ್ಲ, ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಇಲ್ಲ. ಭಕ್ತರ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ. ದೇಗುಲದ ಸಂಪತ್ತಿಂದ ಊರಿಗೆ ಶಿಕ್ಷಣ ಆಗಬೇಕು. ಊರಿನ ಜನರ ವೈದ್ಯಕೀಯಕ್ಕೆ ಹಣ ಬಳಕೆಯಾಗಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಕೊಡಲಿ ಸಾಕು – ಕೃಷ್ಣಬೈರೇಗೌಡ
ಅಯೋಧ್ಯೆಯಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ ಕಾಮಗಾರಿಗಳೆಲ್ಲ ಪೂರ್ಣವಾಗಲಿದೆ. ಅಯೋಧ್ಯೆಯಲ್ಲಿ ಭಕ್ತರ ದರ್ಶನಕ್ಕೆ ಸುಲಲಿತ ವ್ಯವಸ್ಥೆಯಿದೆ. ತಿರುಪತಿಯಂತೆ ಬದಲಿಸಿದರೆ ವ್ಯವಸ್ಥೆ ಸಂಕೋಚ ಮಾಡಿದಂತಾಗುತ್ತದೆ. ಕುಂಭಮೇಳಕ್ಕೆ ತೆರಳುವವರು ತಾಳ್ಮೆಯಿಂದ ವರ್ತಿಸಿ, ಅಪಾಯಕ್ಕೊಳಗಾಗಬೇಡಿ ಎಂದು ಕಿವಿಮಾತು ಹೇಳಿದರು.
ಪ್ರಯಾಗದಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಕುಂಭಮೇಳದಲ್ಲಿ ಕೆಲ ಅನಾನುಕೂಲತೆ ಆಗಿದೆ ಎಂಬ ಮಾಹಿತಿ. ಮುಂದಿನ ಎಲ್ಲಾ ಉತ್ಸವಗಳು ಸಾಂಗವಾಗಿ ನಡೆಯಲಿ. ಪ್ರಯಾಗದಲ್ಲಿ ಅಭೂತಪೂರ್ವ ವ್ಯವಸ್ಥೆ ಇದೆ. ಯಾವುದೇ ಅನಾನುಕೂಲತೆಗಳು ಆಗದಂತೆ ದೇವರಲ್ಲಿ ಪ್ರಾರ್ಥನೆ ಎಂದರು. ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ ಗೆದ್ದ ಬಿಜೆಪಿ; ಎಎಪಿ-ಕಾಂಗ್ರೆಸ್ ಮೈತ್ರಿಗೆ ಮುಖಭಂಗ
ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವಹೇಳನ ವಿಚಾರವಾಗಿ ಮಾತನಾಡಿ, ಯಾರೂ ಕೂಡಾ ಬಹುಮತವನ್ನು ಕಡೆಗಣಿಸಬೇಡಿ. ಖರ್ಗೆಯವರ ಹೇಳಿಕೆ ಅವರ ಆಶಯ ತೆರೆದಿಟ್ಟಿದೆ. ಬಹುಮತದ ಎಲ್ಲರ ಭಾವನೆಯನ್ನು ನಾವು ಗೌರವಿಸಬೇಕು, ಯಾರನ್ನೂ ನೋಯಿಸಬಾರದು. ಇಂತಹ ಹೇಳಿಕೆ ನಿಮ್ಮ ಘನತೆಗೆ ತಕ್ಕದಾದುದ್ದಲ್ಲ. ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಖರ್ಗೆಯವರದ್ದು ಬಾಲಿಶ ಹೇಳಿಕೆ. ಕುಂಭಮೇಳದಲ್ಲಿ ಮಿಂದ ಮಂದಿ ಮೂರ್ಖರಾ? ಕುಂಭಮೇಳಕ್ಕೆ ಬಂದ ಎಲ್ಲರನ್ನ ಖರ್ಗೆ ಅವರು ಮೂರ್ಖರೆಂದು ಹೇಳಿದ ಹಾಗೆ ಆಯ್ತು. ದೇಶ-ವಿದೇಶದಿಂದ ಜನ ಬರ್ತಾಯಿದ್ದಾರೆ. ರಾಜಕೀಯ ಪಕ್ಷಗಳು ಎಲ್ಲರೂ ಮತಭೇದ ಮರೆತು ಯಶಸ್ಸಿಗೆ ಕೈಜೋಡಿಸಬೇಕು. ಏಕ ಮನಸ್ಸಿನಿಂದ ಒಮ್ಮನಸಿನಿಂದ ಎಲ್ಲರೂ ವರ್ತನೆ ಮಾಡಬೇಕು ಎಂದು ತಿಳಿಸಿದರು.