ಉಡುಪಿ: ಸ್ವಚ್ಛತೆಯ ವಿಚಾರದಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನದಲ್ಲಿರುವ ಉಡುಪಿ ನಗರಸಭೆ ಕೊರೊನಾ ವೈರಸ್ ವಿರುದ್ಧ ಸಾರ್ವಜನಿಕರಲ್ಲಿ ಜನಜಾಗೃತಿ ಮಾಡಿಸುತ್ತಿದ್ದು, ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ವಾಶ್ ಬೇಸಿನ್ ಅಳವಡಿಸಿದೆ.
ಸಿಟಿ ಬಸ್ ನಿಲ್ದಾಣದಲ್ಲಿ ನಾಲ್ಕು ನಲ್ಲಿಯಿರುವ ವಾಶ್ ಬೇಸಿನನ್ನು ನಗರಸಭೆ ಅಳವಡಿಸಿದೆ. ಬಸ್ ಆಟೋದಲ್ಲಿ ಪ್ರಯಾಣಿಸುವವರು ಆಗಾಗ ತಮ್ಮ ಕೈಯನ್ನು ಶುದ್ಧೀಕರಿಸಲು ಎಲ್ಲ ವ್ಯವಸ್ಥೆಗಳನ್ನು ನಗರಸಭೆ ಮಾಡಿಕೊಟ್ಟಿದೆ. ಈ ನಲ್ಲಿಗಳಿಗೆ 1 ಸಾವಿರ ಲೀಟರ್ ನೀರಿನ್ನು ಸಂಗ್ರಸುವ ಸಿಂಟೆಕ್ಸ್ ಅನ್ನು ಅಳವಡಿಸಿದ್ದು, ಸಾರ್ವಜನಿಕರು ಕೈಯನ್ನು ಶುಚಿಗೊಳಿಕೊಳ್ಳಲು ವಾಶ್ ಬೇಸಿನ್ ಪಕ್ಕದಲ್ಲೇ ನಮೂದಿಸಲಾಗಿದೆ. ಕೋವಿಡ್-19 ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನರಿಗೆ ವಿವರಿಸಿರುವ ನಗರಸಭೆ ಕೊರೊನಾ ಬಗ್ಗೆ ಇರತರಲ್ಲೂ ಜಾಗೃತಿ ಮೂಡಿಸಿ ಎಂದು ಕರೆನೀಡಿದೆ.
Advertisement
Advertisement
ಅಷ್ಟೇ ಅಲ್ಲದೇ ವಾಶ್ ಬೇಸಿನ್ ಆಗಾಗ ಶುಚಿಗೊಳಿಸಲು ಒಬ್ಬ ನಗರಸಭೆಯ ಕಾರ್ಮಿಕನನ್ನು ನೇಮಕ ಮಾಡಲಾಗಿದೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಸಾರ್ವಜನಿಕರಲ್ಲಿ ಎಚ್ಚರಿಕೆ ಇರಲಿ ಎಂದು ನಗರಸಭೆ ಬ್ಯಾನರ್‍ನಲ್ಲಿ ಉಲ್ಲೇಖಿಸಿದೆ. ಭಾನುವಾರದಿಂದ ಹ್ಯಾಂಡ್ ವಾಶ್, ಸೋಪ್ ಅನ್ನು ವಾಶ್ ಬೇಸಿನ್ ಬಳಿ ಇರಿಸುತ್ತೇವೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.
Advertisement
ಇತ್ತ ಉಡುಪಿ ನಗರಸಭೆ ಜನಪರವಾದ ಕೆಲಸ ಮಾಡಿದೆ ನಾವು ನಮ್ಮ ಶುಚಿತ್ವವನ್ನು ಕಾಪಾಡಿಕೊಳ್ಳುತ್ತೇವೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಸಾರ್ವಜನಿಕ ವಾಶ್ ಬೇಸಿನ್ ಅಳವಡಿಸಿದ ಕೂಡಲೇ ಸಾರ್ವಜನಿಕರು ತಮ್ಮ ಕೈ, ಮುಖವನ್ನು ತೊಳೆದುಕೊಂಡು ನಗರಸಭೆ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.