ಉಡುಪಿ: ಡ್ರೋನ್ ಕ್ಯಾಮೆರಾ ಭಾರತ ದೇಶದ ಸೈನ್ಯದಲ್ಲಿ ಮಹತ್ವದ ಪಾತ್ರವಹಿಸ್ತಾಯಿದೆ. ಅದು ಬಿಟ್ಟರೆ ಡ್ರೋನ್ ಯೂಸ್ ಆಗೋದು ವಿಭಿನ್ನ ದೃಶ್ಯಾವಳಿಗಳ ಶೂಟಿಂಗ್‍ಗಾಗಿ. ಇದೇ ಡ್ರೋನನ್ನು ಉಪಯೋಗಿಸಿಕೊಂಡು ಕರ್ನಾಟಕದ ಬರವನ್ನು ನೀಗಿಸಿ ಮಳೆ ಬರಿಸೋದಕ್ಕೆ ಹೊರಟಿದೆ ಉಡುಪಿಯ ಒಂದು ಟೀಂ.
Advertisement
ಡ್ರೋನ್..! ಕ್ಯಾಮೆರಾ ತಂತ್ರಜ್ಞಾನದ ಸದ್ಯದ ಅತ್ಯುನ್ನತ ಸಂಶೋಧನೆಗಳಲ್ಲಿ ಒಂದು. ನಿಂತಲ್ಲಿಂದ ಬರಿಗಣ್ಣಿನಲ್ಲಿ ನೋಡಲಾಗದ- ಪಕ್ಷಿನೋಟವನ್ನು ಸೆರೆ ಹಿಡಿಯುವ ವಿಭಿನ್ನ ತಂತ್ರಜ್ಞಾನ. ಭೂಮಿಯಿಂದ ವಿಮಾನದಂತೆ ಹಾರಿ ಮತ್ತೆ ಭೂಮಿಗೆ ಇಳಿಯುವ ಸಾಧನ. ಸೈನ್ಯದಲ್ಲಿ ದೇಶದ ರಕ್ಷಣೆಯಲ್ಲಿ ಈ ಡ್ರೋನ್ ಉಪಯೋಗವಾಗುತ್ತಿದೆ. ಅದು ಬಿಟ್ಟರೆ, ಸಿನೆಮಾ ಗಳಲ್ಲಿ ಸುಂದರ ದೃಶ್ಯ ಸೆರೆ ಹಿಡಿಯಲು ಫೋಟೋ ಕ್ಲಿಕ್ ಮಾಡಲು ಡ್ರೋನ್ ಬಳಕೆಯಾಗ್ತಿದೆ. ಆದ್ರೆ ಡ್ರೋನನ್ನು ಬೇರೆಯದೇ ಕಾರಣಕ್ಕೆ ಉಪಯೋಗಿಸಬಹುದು.
Advertisement
Advertisement
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರತ್ನಾಕರ್ ಮತ್ತು ಪ್ರಜ್ವಲ್ ದೊಡ್ಡ ಗಾತ್ರದ ಡ್ರೋನ್ ತಯಾರಿ ಮಾಡಿದ್ದಾರೆ. ಇದು ಮಾಮೂಲಿ ಡ್ರೋನ್ ಅಲ್ಲ. ಸಿಲ್ವರ್ ಅಯೋಡೈಸ್ಟ್ ಸೆಲ್‍ಗಳನ್ನು ಹೊತ್ತು ಬಾನೆತ್ತರಕ್ಕೆ ಹಾರುತ್ತದೆ. ನೀರಿಯುವ ಮೋಡಗಳ ಮೇಲೆ ಅದನ್ನು ಸಿಡಿಸುತ್ತದೆ. ಬಿರು ಬೇಸಿಗೆಯಲ್ಲಿ ಮಳೆ ತರಿಸುತ್ತದೆ. ಮೋಡ ಬಿತ್ತನೆಗಾಗಿ ಈ ಡ್ರೋನ್ ಸಿಸ್ಟಮನ್ನು ಇವರಿಬ್ಬರು ಕಂಡು ಹುಡುಕಿದ್ದಾರೆ.
Advertisement
ಕ್ಲೌಡ್ ಸೀಡಿಂಗ್ ಡ್ರೋನ್‍ನಲ್ಲಿ ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಬಹುದು. ಇದರಲ್ಲಿ ವೇ ಪಾಯಿಂಟ್ ಟೆಕ್ನಾಲಜಿ ಅಪ್ಲೈ ಮಾಡಿದ್ದೇವೆ. 11 ಲಕ್ಷ ರೂಪಾಯಿ ಸದ್ಯ ಖರ್ಚಾಗಿದೆ. ನಾನು ಪಿಯುಸಿ ಕಲಿತವ. ಟೆಕ್ನಿಕಲಿ ನಾನು ಅಷ್ಟು ಪರಿಣಿತ ಅಲ್ಲ. ಹೀಗಾಗಿ ಏರೋನಾಟಿಕಲ್ ಕಲಿತಿರುವ ಪ್ರಜ್ವಲ್ ಅವರ ಸಹಾಯ ಪಡೆದಿದ್ದೇನೆ. ಪ್ರಧಾನಿ ಮೋದಿಯವರ ಸ್ಟಾರ್ಟ್ ಅಪ್ ಇಂಡಿಯಾ ಗೂ ಇದು ಅನ್ವಯವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಉತ್ತೇಜನ ನೀಡಿದರೆ ನಾವು ಮಾಡಿದ ಶ್ರಮ ರಾಜ್ಯ- ದೇಶದ ಜನರಿಗೆ ಉಪಯೋಗವಾಗುತ್ತದೆ ಎಂದು ಡ್ರೋನ್ ವಿನ್ಯಾಸಕ ರತ್ನಾಕರ್ ಹೇಳುತ್ತಾರೆ.
ಡ್ರೋನ್‍ನಲ್ಲಿ ಮೋಡ ಬಿತ್ತನೆ ಮಾಡಬಹುದು. ತಯಾರಿ ಮಾಡಿರುವ ಮಷೀನ್ ಸಮರ್ಥವಾಗಿದೆ ಎಂದು ಇಸ್ರೋದ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಡ್ರೋನ್ ಉಪಯೋಗವಾಗಬೇಕಾದ್ರೆ ಅದಕ್ಕೆ ಸರ್ಕಾರದ ಸಪೋರ್ಟ್ ಬೇಕು. ಇದೊಂದು ಉತ್ತಮ ಆವಿಷ್ಕಾರ. ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಬಹುದು ಎಂದು ಹೇಳಿದ್ದಾರೆ. ಇದು ಯಶಸ್ವಿಯಾದ್ರೆ ರಾಜ್ಯಕ್ಕೆ ಮತ್ತು ದೇಶಕ್ಕೆ ಕೊಡುಗೆಯಾಗಲಿದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಿದೆ. ಸಿಎಂ ಮತ್ತು ಕೃಷಿ ಸಚಿವರಿಗೆ ಈ ತಂತ್ರಜ್ಞಾನದ ಪರಿಚಯಿಸುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.