ಉಡುಪಿ: ಆರೋಗ್ಯ ಸಚಿವರು ವಾಸ್ತವ್ಯ ಮಾಡುವುದರಿಂದರೊಂದಿಗೆ ಮಾನವೀಯತೆಗೂ ಸಾಕ್ಷಿಯಾಗಿದ್ದಾರೆ. ಉಡುಪಿಯಲ್ಲಿ ನಡೆದ ಅಪಘಾತದಲ್ಲಿ ಗಾಯಾಳುಗಳಿಗೆ ನೀರು ಕುಡಿಸಿ ಸಮಾಧಾನಪಡಿಸಿದ ಸಚಿವ ಶ್ರೀರಾಮಲು ನಂತರ ಶಾಸಕರ ಕಾರಿನಲ್ಲಿ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟೇಶ್ವರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಿಕ್ಷಾ, ಡಿವೈಡರಿಗೆ ಡಿಕ್ಕಿಹೊಡೆದು ಪಲ್ಟಿಯಾಗಿತ್ತು. ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರು ಗಾಯಗೊಂಡು ನರಳಾಡುತ್ತಿದ್ದರು. ನೋಡನೋಡುತ್ತಿದ್ದಂತೆ ಆರೋಗ್ಯ ಸಚಿವರು ಸ್ಥಳಕ್ಕೆ ಬಂದರು. ಕುಂದಾಪುರದಲ್ಲಿ ನಡೆಯಬೇಕಿದ್ದ ಸರ್ಕಾರಿ ತಾಲೂಕು ಆಸ್ಪತ್ರೆ ಉದ್ಘಾಟನೆಗೆ ತೆರಳುತ್ತಿದ್ದ ಸಚಿವರು ಕಾರ್ಯಕ್ರಮಕ್ಕೆ ಹೋಗೋದನ್ನ ಬಿಟ್ಟು ಗಾಯಾಳುಗಳಿಗೆ ಸ್ಪಂದಿಸಿದ್ರು.
Advertisement
Advertisement
ತಾವೇ ಗಾಯಾಳು ಅತ್ತೆ ಹಾಗೂ ಸೊಸೆಯನ್ನ ಸಾರ್ವಜನಿಕರೊಂದಿಗೆ ಸೇರಿಕೊಂಡು ಉಡುಪಿ ಶಾಸಕ ರಘುಪತಿ ಭಟ್ ಅವರ ಇನ್ನೋವಾ ಕಾರಿನಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಿ ಕುಂದಾಪುರಕ್ಕೆ ತೆರಳಿದರು. ಕೋಟೇಶ್ವರದಲ್ಲಿ ನಡೆದ ಈ ಅಪಘಾತದಲ್ಲಿ ಗಾಯಾಳುಗಳಿಗೆ ಈ ರೀತಿ ಸ್ಪಂದಿಸುವ ಮೂಲಕ ಶ್ರೀರಾಮಲು ಮಾನವೀಯತೆಗೆ ಸಾಕ್ಷಿಯಾದ್ರು.
Advertisement
ಇತ್ತೀಚೆಗೆ ಚಾಮರಾಜನಗರದಲ್ಲಿ ಲಘು ಹೃದಯಾಘಾತವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ದು ಸಚಿವರು ಮಾನವೀಯತೆ ಮೆರೆದಿದ್ದರು. ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಲಘು ಹೃದಯಾಘಾತವಾಗಿ ರಸ್ತೆ ಮಧ್ಯೆಯಲ್ಲಿ ಬಿದ್ದು ಮಹಿಳೆ ಒದ್ದಾಡುತ್ತಿದ್ದರು.
ಸಮೀಪದಲ್ಲೇ ಆಸ್ಪತ್ರೆ ಇದ್ದರೆ ಆಂಬುಲೆನ್ಸ್ ಬರುವವರೆಗೆ ಕಾಯದೆ ಅಲ್ಲಿದ್ದ ವಾಹದಲ್ಲಿ ಗಾಯಾಳುಗಳನ್ನು ಸಾಗಿಸುವುದು ಮಾನವೀಯತೆ. ಇದನ್ನು ಎಲ್ಲರೂ ರೂಢಿಸಿಕೊಂಡರೆ ಸಾವಿರಾರು ಪ್ರಾಣಗಳನ್ನು ಕಾಪಾಡಬಹುದು. 3/3
— B Sriramulu (@sriramulubjp) September 28, 2019
ಇದೇ ಮಾರ್ಗದಲ್ಲಿ ಶ್ರೀರಾಮುಲು ಅವರು ಕೂಡ ಮಲೆ ಮಹದೇಶ್ವರನ ಬೆಟ್ಟಕ್ಕೆಂದು ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಒದ್ದಾಡುತ್ತಿದ್ದ ಮಹಿಳೆಯನ್ನು ಕಂಡ ಸಚಿವರು ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಕಾರಿನಲ್ಲೇ ಮಹಿಳೆಯನ್ನು ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ್ದರು.
— B Sriramulu (@sriramulubjp) September 25, 2019