ಉಡುಪಿ: ಮಹಿಳೆಯೊಬ್ಬರ ಜೀವ ಉಳಿಸಲು ಹೋಗಿ ಶಿಕ್ಷಕಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಉಡುಪಿಯ (Udupi) ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರ (Kundapura) ತಾಲೂಕಿನ ಕೊಟೇಶ್ವರದ ಅರ್ಚನಾ ಕಾಮತ್ (34) (Archana Kamath) ಮೃತಪಟ್ಟ ದುರ್ದೈವಿ. ಇವರು ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 69 ವರ್ಷದ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಇವರು ಬಯಸಿದ್ದರು. ಯಕೃತ್ ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅರ್ಚನಾ ದಾಖಲಾಗಿದ್ದರು. ಆದರೆ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ.
ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಕಾಮತ್ ಸಕ್ರಿಯವಾಗಿದ್ದರು. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ. ಅರ್ಚನಾ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಇದನ್ನೂ ಓದಿ: Nagamangala Violence | ಪಿಎಫ್‌ಐ ಸಂಘಟನೆಯವರು ಮಾತ್ರವಲ್ಲ, ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ – ಸುರೇಶ್‌ಗೌಡ