– ವ್ಯಕ್ತಿತ್ವವೇ ನಿಜವಾದ ಸೌಂದರ್ಯ
ಉಡುಪಿ: ಫೇಸ್ ಬುಕ್ ಮತ್ತು ವಾಟ್ಸಾಪ್ ನಿಂದ ಯುವಕರು ಆದಷ್ಟು ಬೇಗ ಬ್ರೇಕಪ್ ಆಗಿ. ಆ ಟೈಮಲ್ಲಿ ದೇಶದ ಬಗ್ಗೆ, ನಿಮ್ಮ ತಂದೆ-ತಾಯಿಗಳ ಬಗ್ಗೆ ಚಿಂತೆ ಮಾಡಿ ಎಂದು ಅವಧೂತ ವಿನಯ್ ಗುರೂಜಿ ಕರೆ ಕೊಟ್ಟಿದ್ದಾರೆ.
ಉಡುಪಿಯಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಲು ಪ್ರಯತ್ನಿಸಿದರು. ವಿದ್ಯಾಭ್ಯಾಸ ಮಾಡಿ, ವಿದೇಶಕ್ಕೆ ಹಾರುವುದನ್ನು ಕಡಿಮೆ ಮಾಡಿ. ದೇಶದಲ್ಲಿ ಇದ್ದು ಕೆಫೆ ಕಾಫಿ ಡೇಯ ಸಿದ್ಧಾರ್ಥ್ ರೀತಿಯ ಸಾಧನೆ ಮಾಡಿ ಎಂದು ಸಲಹೆ ನೀಡಿದರು.
Advertisement
Advertisement
ಕಾಲೇಜು ವಿದ್ಯಾರ್ಥಿಗಳಿಗೆ ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಮುಖದ ಸೌಂದರ್ಯ ಸೌಂದರ್ಯವೇ ಅಲ್ಲ. ವ್ಯಕ್ತಿತ್ವವೇ ನಿಜವಾದ ಸೌಂದರ್ಯ ಆಗಬೇಕು. ವ್ಯಾಲೆಂಟೈನ್ ಡೇ ಮಾಡುವಂತೆ ವಾಲೆಂಟಿಯರ್ ಆಗಿ ಗಿಡ ನೆಡಿ. ಬ್ಲಡ್ ಕೊಡಿ. ಮನೆಯವರ ಕಷ್ಟಕ್ಕೆ ಆಧಾರವಾಗಿ. ದೇಶಕ್ಕೆ ಬೆನ್ನೆಲುಬು ಆಗಿ. ದೇಶದ ನದಿಗಳ ಬಗ್ಗೆ ಕಾಳಜಿ ಇರಲಿ. ದೇಹಕ್ಕೆ ನರಗಳೆಷ್ಟು ಮುಖ್ಯವೋ, ನದಿಗಳು ನಮಗೆ ಅಷ್ಟೇ ಮುಖ್ಯ ಎಂದು ಹೇಳಿದರು.
Advertisement
2019- 2020 ನೇ ಸಾಲಿನ ಸರ್ವ ಕಾಲೇಜು ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನೀಯರ ಚುನಾವಣೆ ಉತ್ಸಾಹ, ವಿಜಯೋತ್ಸವ, ನೃತ್ಯ, ಅವಧೂತರಿಗೆ ಕೊಂಚ ಇರುಸು ಮುರುಸು ಆದಂತೆ ಕಂಡುಬಂತು.