ಉಡುಪಿ: ಜಿಲ್ಲೆಯ ಮಲ್ಪೆ ಸಮೀಪದ ಸೈಂಟ್ ಮೇರೀಸ್ ಐಲ್ಯಾಂಡ್‍ಗೆ ಪ್ರವಾಸಕ್ಕೆ ತೆರಳಿದ್ದ ಗೆಳೆಯರ ತಂಡ ರಾತ್ರಿ ಅಲ್ಲೇ ಕಳೆದು ಬೆಳಗ್ಗೆ ವಾಪಾಸ್ಸಾದ ಘಟನೆ ನಡೆದಿದೆ.
ಸೈಂಟ್ ಮೇರೀಸ್‍ಗೆ ಪ್ರವಾಸ ಹೋದವರು ಸಂಜೆ ವಾಪಾಸ್ ಬರಬೇಕು ಎಂಬೂದು ನಿಯಮ. ಆದರೆ ಕೇರಳದ ಶೀಜಾ, ಜೋಸ್, ಹರೀಶ್ ಮತ್ತು ಜಸ್ಟಿನ್ ಅಲ್ಲೇ ಉಳಿದುಕೊಂಡು ಭಾನುವಾರ ವಾಪಾಸ್ಸಾಗಿದ್ದಾರೆ.
Advertisement
Advertisement
ವಾಪಾಸ್ ಬರುತ್ತಿದ್ದಂತೆ ನಮ್ಮನ್ನು ಕರೆದುಕೊಂಡು ಹೋದ ಬೋಟ್ ಬಿಟ್ಟು ಬಂದಿದೆ. ವಾಪಾಸ್ ಕರೆದುಕೊಂಡು ಬಂದಿಲ್ಲ. ರಾತ್ರಿಯಿಡೀ ಬೋಟ್ ಗಾಗಿ ಕಾದರೂ ಬೋಟ್ ಗಳು ಬಂದಿಲ್ಲ ಎಂದು ದೂರಿದ್ದಾರೆ. ಇತ್ತ ಬೋಟ್ ಮಾಲೀಕರು, ಬೋಟ್ ಬರುವ ಸಂದರ್ಭದಲ್ಲಿ ಈ ನಾಲ್ವರು ಕಾಣಿಸಿಕೊಂಡಿಲ್ಲ. ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ ಎಂದು ದೂರಿದ್ದಾರೆ.
Advertisement
ಸೈಂಟ್ ಮೇರೀಸ್‍ನಲ್ಲಿ ವಾಸ್ತವ್ಯ ಹೂಡುವಂತಿಲ್ಲ. ನಾಲ್ವರ ಹೇಳಿಕೆಗಳನ್ನು ಗಮನಿಸಿದಾಗ ಹೇಳಿಕೆಗಳು ತದ್ವಿರುದ್ಧವಾಗಿದೆ. ಬೋಟ್ ವಾಪಾಸ್ ಬರುವ ಸಂದರ್ಭ ಅಲ್ಲೇ ರಾತ್ರಿ ಕಳೆಯುವ ಉದ್ದೇಶ ಅವರದ್ದಾಗಿತ್ತು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಸೈಂಟ್ ಮೇರೀಸ್ ದ್ವೀಪದಲ್ಲಿ ಕೂಡ ಸೆಕ್ಯೂರಿಟಿ ನೇಮಿಸಲಾಗುವುದು ಎಂದು ಪ್ರವಾಸೋದ್ಯಮ ಸಮಿತಿ ಹೇಳಿದೆ.
Advertisement
ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.